Mysore
26
overcast clouds

Social Media

ಬುಧವಾರ, 01 ಜುಲೈ 2026
Light
Dark

ತಾಯಿ, ಮಗಳು ನಾಪತ್ತೆ : ಸುಳಿವಿಗಾಗಿ ಮನವಿ

ಚಾಮರಾಜನಗರ: ತಾಲ್ಲೂಕಿನ ಚಂದಕವಾಡಿ ಗ್ರಾಮದ ನಿವಾಸಿ ಉಮಾ ಮತ್ತು ಅವರ ಮಗಳು ಅನುಶ್ರೀ ಎಂಬವರು ಕಾಣೆಯಾಗಿದ್ದು ಇವರ ಪತ್ತೆಗೆ ಸಹಕರಿಸುವಂತೆ ಕೋರಲಾಗಿದೆ.
38 ವರ್ಷದ ಉಮಾ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ದುಂಡು ಮುಖ, ಕಪ್ಪು ಕೂದಲು ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ಸೀರೆ, ರವಿಕೆ ಧರಿಸಿರುತ್ತಾರೆ. ಕನ್ನಡ ಮಾತನಾಡುತ್ತಾರೆ. 13 ವರ್ಷದ ಅನುಶ್ರೀ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ, ದುಂಡು ಮುಖ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ಮಿಡಿ ಧರಿಸಿರುತ್ತಾರೆ.
ಇವರ ಸುಳಿವು ದೊರೆತಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ( 08226-222243) ಪೂರ್ವ ಪೊಲೀಸ್ ಠಾಣೆ ,( 08226-22205), ಜಿಲ್ಲಾ ನಿಯಂತ್ರಣ ಕೊಠಡಿ (08226-222383) ಸಂಪರ್ಕಿಸುವಂತೆ ಪೂರ್ವ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!