Mysore
27
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಹಣ, ಮೊಬೈಲ್ ಇದ್ದ ಪರ್ಸ್ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದ ಫೈರೋಜ್ ಖಾನ್

ಸುಂಟಿಕೊಪ್ಪ: ಇಲ್ಲಿನ ಕನ್ನಡ ವೃತ್ತದ ಬಳಿ ವ್ಯಕ್ತಿಯೊಬ್ಬರಿಗೆ  ಹಣ ಮತ್ತು ಮೊಬೈಲ್ ಇರುವ ಪರ್ಸ್ ಸಿಕಿದ್ದು, ಪೊಲೀಸ್ ಠಾಣೆಗೆ ನೀಡುವ ಪ್ರಾಮಾಣಿಕತೆ ಮೆರಿದಿದ್ದಾರೆ.
ಗದ್ದೆಹಳ್ಳದ ಗಿರಿಯಪ್ಪ ಮನೆ ನಿವಾಸಿ ಫೈರೋಜ್ ಖಾನ್ ಎಂಬವರು ಪಟ್ಟಣಕ್ಕೆ ಹೋಗುತ್ತಿದ್ದ ವೇಳೆ ಕನ್ನಡ ವೃತ್ತದ ಬಳಿ ಪರ್ಸ್ ಸಿಕ್ಕಿದ್ದು, ಇದನ್ನು ಪೊಲೀಸ್ ಠಾಣೆಗೆ ನೀಡಿದ್ದಾರೆ.
ಪರ್ಸ್‌ಲ್ಲಿದ್ದ ಮೊಬೈಲ್‌ಗೆ ಕರೆ ಬಂದ ಸಂದರ್ಭದಲ್ಲಿ ಪೊಲೀಸರು ಅವರನ್ನು ವಿಚಾರಿಸಿದಾಗ ವಾದಾಪುರ ಸಮೀಪದ ಜಾರ್‌ಕೊಲ್ಲಿ ನಿವಾಸಿ ಸಿಂಧು ಪ್ರಸನ್ನ ಎಂಬುವರಿಗೆ ಸೇರಿದ್ದಾಗಿ ಗೊತ್ತಾಗಿದೆ. ತಕ್ಷಣ ಅವರನ್ನು ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಕೇರಳದ ಎರ್ನಾಕುಲಂಗೆ ಹೋಗುತ್ತಿದ್ದ ವೇಳೆ ಪರ್ಸ್ ಕಳೆದು ಹೋಗಿದೆ ಎಂದು ತಿಳಿಸಿದ್ದಾರೆ.
ನಂತರ ಠಾಣೆಯಿಂದ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಠಾಣಾಧಿಕಾರಿ ಮಂಜು, ಎಎಸ್‌ಐ ಜಯಕುಮಾರ್‌  ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!