Mysore
21
broken clouds

Social Media

ಸೋಮವಾರ, 13 ಜನವರಿ 2025
Light
Dark

ಮೊಹರಂ ಹಬ್ಬದ ಪ್ರಯುಕ್ತ ಜೀವ ಜಲ ವಿತರಣೆ

ಮೈಸೂರು : ಇದೆ ತಿಂಗಳ ಒಂಬತ್ತನೇ ತಾರೀಖಿನ ಮೊಹರಂ ಹಬ್ಬದ ಪ್ರಯುಕ್ತ “ಹುಸೇನಿ ಯೂತ್ ಕ್ಲಬ್” ನವರು ನಗರದ ವಿವಿಧ ಭಾಗಗಳಿಗೆ ತೆರಳಿ ಜೀವ ಜಲವನ್ನು ವಿತರಿಸಿ, ಮಾನವೀಯತೆಗೆ ಹಾಗೂ ಧರ್ಮದ ಮೌಲ್ಯಗಳನ್ನು ಕಾಪಾಡಲು ಪ್ರವಾದಿ ಹುಸೇನ್ ಇಬ್ನ್ ಅಲಿ ಅವರು ಕರ್ಬಾಲದಲ್ಲಿ ಮಾಡಿದ ತ್ಯಾಗ ಬಲಿದಾನದ ಮಹತ್ವವನ್ನು ಸಾರಿದರು. ಮದ್ಯ ಪ್ರಾಚ್ಯದ  ಕಾರ್ಬಾಲದಲ್ಲಿ  ಹುಸೇನ್ ಇಬ್ನ್ ಅಲಿ ಹಾಗೂ ಅವರ ಸಂಗಡಿಗರಿಗೆ ವಾರನುಗಟ್ಟಲೆ ವಿರೋಧಿಗಳು ಸುತ್ತುವರೆದು ಕುಡಿಯುವ ನೀರನ್ನು ನಿರಾಕರಿಸಿದ್ದನ್ನು ಸ್ಮರಿಸಬಹುದಾಗಿದೆ.

ಮೊಹರಂ ಹಬ್ಬದ ಬಗ್ಗೆ ಹೇಳುವುದಾರೆ ಕರ್ನಾಟಕ ರಾಜ್ಯದ ರಾಯಚೂರ ಜಿಲ್ಲೆಯ ಮುದಗಲ್ಲ ಗ್ರಾಮದಲ್ಲಿ ಮೊಹರಂ ಆಚರಣೆಯಲ್ಲಿ ಮುಸ್ಲಿಮೇತರರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಹರಕೆ ಹೊತ್ತ ಹಿಂದೂ- ಮುಸ್ಲಿಮರು ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಹತ್ತನೆಯ ದಿನ ಹೊರಡುವ ಕಾಸೀಮ ಅಲಂ ಮತ್ತು ಹಸನ ಅಲಂ ಒಂದಕ್ಕೊಂದು ಭೇಟಿಯಾದಾಗ ನೆರೆದ ಜನ ಸಾಮೂಹ ತೇರಿನ ಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರ ಮಾಡಿ ಭಯ ಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಹಿಂದುಗಳ ಜಾತ್ರೆಯ ಸಂಭ್ರಮವನ್ನು ನೆನಪಿಸುವ ಮುದಗಲ್ಲ ಮೊಹರಂ ಪ್ರಚಲಿತವಾಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ