Mysore
30
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಸ್ವಗ್ರಾಮದಿಂದಲೇ ಶಾಸಕ ಎನ್‌. ಮಹೇಶ್‌ ಗೆ ʼಗೋ ಬ್ಯಾಕ್ʼ ಘೋಷಣೆ

ಕೊಳ್ಳೇಗಾಲ:ಶಾಸಕ ಎನ್.ಮಹೇಶ್ ಅವರು ಶಾಸಕರಾಗಿ ಸ್ವಗ್ರಾಮವನ್ನೇ ಅಭಿವೃದ್ಧಿ ಮಾಡಲು ವಿಫಲರಾಗಿದ್ದಾರೆ ಎಂದು ಶಂಕನಪುರ ಗ್ರಾಮಸ್ಥರು ಗೋ ಬ್ಯಾಕ್ ಘೋಷಣೆ ಕೂಗಿದ ಘಟನೆ ನಡೆದಿದೆ.
ತಾಲ್ಲೂಕಿನ ಶಂಕನಪುರ ಗ್ರಾಮಕ್ಕೆ ಭಾನುವಾರ ಬೆಳಿಗ್ಗೆ ಆಗಮಿಸಿದ ಶಾಸಕ ಎನ್.ಮಹೇಶ್ ಅವರು ಗ್ರಾಮಸ್ಥರ ಸಭೆ ಕರೆದು ಚರ್ಚಿಸುವ ಸಂದರ್ಭದಲ್ಲಿ ಗ್ರಾಮದ ಶೇಖರ್ ಬುದ್ದ ಹಾಗೂ ನಿಂಗರಾಜು.ಎಸ್ ಅವರು ಮಾತನಾಡಿ ನೀಡಿರುವ ಮತದಾನದ ಪಾವಿತ್ರ್ಯಕ್ಕೆ ದಕ್ಕೆ ಉಂಟಾಗಿದೆ. ನೀವು ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಿಕೊಡುವಲ್ಲಿ ವಿಫಲರಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಭೆ ಒಂದು ಪೊಲಿಟಿಕಲ್ ಗಿಮಿಕ್ ಆಗಿದ್ದು, ಕೊನೆ ಸಂದರ್ಭದಲ್ಲಿ ಭೇಟಿ ಕೊಟ್ಟಿದ್ದೀರಿ ೨೦ ವರ್ಷಗಳಿಂದ ಇದನ್ನೇ ಹೇಳುತ್ತಾ ಬಂದಿದ್ದು ನೀವು ಹೇಳಿದ್ದು ಏನು ನಡೆಯುವುದಿಲ್ಲ ಎಂಬುದು ನಿಖರವಾಗಿದೆ. ಆಗಾಗಿ ನೀವು ನಮ್ಮ ಗ್ರಾಮಸ್ಥರನ್ನು ಭೇಟಿ ಮಾಡಲು ಅರ್ಹರಲ್ಲ,ನಮಗೆ ಸಾಂತ್ವನ ಹೇಳಲು ಹಾಗೂ ಸಭೆ ಮಾಡಲು ಅರ್ಹರಲ್ಲ ಎಂದು ಗೋ ಬ್ಯಾಕ್ ಮಹೇಶಣ್ಣ ಎಂಬ ಘೋಷಣೆಯನ್ನು ಕೂಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ