Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಕಾಗದದ ಹಾಳೆಯಲ್ಲಿ ಭಗವದ್ಗೀತೆಯ 18 ಅಧ್ಯಾಯ ಬರೆದ ಮಂಡ್ಯದ ಅರ್ಚಕ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ದೇವಾಲಯವೊಂದರ ಅರ್ಚಕರೋರ್ವರು ಕಾಗದದ ಹಾಳೆಯಲ್ಲಿ ವಿಶಿಷ್ಟ ಚಿತ್ತಾರ ಬಿಡಿಸಿದ್ದಾರೆ.

ಕಾಗದದ ಹಾಳೆಯೊಂದರಲ್ಲಿ ಚಿತ್ರ ಸಹಿತ ಮಾಹಿತಿಯನ್ನು ಬರೆಯುವ ಮೂಲಕ ದೇವಾಲಯದ ಅರ್ಚಕರು ವಿಶಿಷ್ಟ ಸಾಧನೆ ಮೆರೆಯುತ್ತಾ ಬಂದಿದ್ದಾರೆ. ಎ4 ಶೀಟ್‌, ಚಾರ್ಟ್‌ ಪೇಪರ್‌ ಬಳಸಿ ಅವುಗಳಲ್ಲಿ ಚಿತ್ರ ಬರೆಯುವ ಈ ಅರ್ಚಕ, ಅದರ ಜೊತೆ ಜೊತೆಗೆ ವ್ಯಕ್ತಿ ಆಗಿದ್ದರೆ ಅಂತಹ ಮಹಾನ್‌ ನಾಯಕರ ಜೀವನ ಚರಿತ್ರೆಯನ್ನೂ ಸಹ ಬರೆಯುತ್ತಾರೆ.

ಅಂದಹಾಗೆ ಇವರ ಹೆಸರು ಪಟ್ಟಸೋಮನಹಳ್ಳಿಯ ಶ್ರೀ ಶಿವಶೈಲಾ ದೇವಾಲಯದ ಅರ್ಚಕ ವಿಜಯ್‌ ಕುಮಾರ್‌. ಅತೀ ಸೂಕ್ಷ್ಮ ಬರವಣಿಗೆಯ ಇವರ ಕೌಶಲ್ಯವಂತೂ ಭಾರೀ ಅದ್ಬುತವೆನಿಸಿದೆ.

ಎ4 ಶೀಟ್‌ವೊಂದರಲ್ಲಿ ವಿಜಯ್‌ ಕುಮಾರ್‌ ಅವರು ಸಾವಿರಕ್ಕೂ ಹೆಚ್ಚು ಬಾರಿ ಜೈ ಶ್ರೀರಾಮ್‌ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಭಗವದ್ಗೀತೆಯ 18 ಅಧ್ಯಾಯಗಳನ್ನು ಒಂದೇ ಹಾಳೆಯಲ್ಲಿ ಬರೆದು ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ. ಡಾ.ರಾಜ್‌ ಕುಮಾರ್‌, ನಟ ವಿಷ್ಣುವರ್ಧನ್‌, ಕೆ.ಎಸ್.ನಿಸಾರ್‌ ಅಹಮ್ಮದ್‌ ಸೇರಿದಂತೆ ಅನೇಕರ ಬಗ್ಗೆ ಚಿತ್ರ ಸಹಿತ ಅವರ ಆತ್ಮಚರಿತ್ರೆಯನ್ನು ಒಂದೇ ಕಾಗದದಲ್ಲಿ ಬರೆಯಬಲ್ಲವರಾಗಿದ್ದಾರೆ.

 

 

Tags: