Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

೧೧೦ ಅಡಿ ದಾಟಿದ ಜಲಾಶಯದ ಇಂದಿನ ನೀರಿನಮಟ್ಟ

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರೆದಿರುವ ಹಿನ್ನೆಲೆ  ಮಂಡ್ಯ ಜಿಲ್ಲೆಯ  ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್‌ ಎಸ್‌ ಜಲಾಶಯಕ್ಕೆ ೩೬೬೭೪ ಕ್ಯೂಸೆಕ್‌ ಒಳಹರಿವಿದ್ದು, ಜಲಾಶಯದ ನೀರಿನ ಮಟ್ಟ ೧೧೦.೬೦ ಅಡಿಗೆ ಏರಿಕೆಯಾಗಿದೆ.

ಒಳಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿದು ಬಂದಿದೆ. ಇದರಿಂದ ಮತ್ತೆ ರೈತರ ಜೀವನಾಡಿ ಕೆಆರ್‌ ಎಸ್‌ ಜಲಾಶಯಕ್ಕೆ ಜೀವಕಳೆ ಬಂದಿದೆ.

ಕಳೆದ ನಾಲ್ಕೈದು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗುತ್ತಿರುವ ಪರಿಣಾಮ ಕಳೆದ ೨೪ ಗಂಟೆಯಲ್ಲಿ ಕೆಆರ್‌ ಎಸ್‌ ಜಲಾಶಯದಲ್ಲಿ ೩ ಅಡಿ ನೀರು ಹೆಚ್ಚಳವಾಗಿದೆ. ಮಂಗಳವಾಋ ೧೦೭.೬೦ ಅಡಿ ಇದ್ದ ನೀರಿನ ಮಟ್ಟ ಇಂದು ೧೧೦.೬೦ ಗೆ ಏರಿಕೆಯಾಗಿದೆ. ಅಲ್ಲದೆ ೩೨೩೩೦ ಟಿಎಂಸಿ ನೀರು ಸಂಗ್ರಹವಾಗಿದೆ.

Tags: