ಮಂಡ್ಯ : ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಸಾರುವ ಮೇಲುಕೋಟೆ ಉತ್ಸವ ಕಳೆಗಟ್ಟಿದೆ. ಇಂದು ಮುಂಜಾನೆಯಿಂದಲೇ ಕಾರ್ಯಕ್ರಮ ಶುರುವಾಗಿದ್ದು, ಮಂಡ್ಯದಿಂದ ವೈರಮುಡಿ ಮೆರವಣಿಗೆ ಮೂಲಕ ಮೇಲುಕೋಟೆ ತಲುಪಲಿದೆ.
ಇಂದು(ಏ.7)ಮುಂಜಾನೆಯೇ ಜಿಲ್ಲಾ ಖಜಾನೆಯಲ್ಲಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ವೈರಮುಡಿಯನ್ನು ಹೊರ ತೆಗೆಯಲಾಯಿತು. ಜಿಲ್ಲಾಧಿಕಾರಿ ಕುಮಾರ ಹಾಗೂ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ವೈರಮುಡಿಗಳ ಪೆಟ್ಟಿಗೆಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಈ ವೇಳೆ ಜಿಪಂ ಸಿಇಒ ಕೆ.ಆರ್ ನಂದಿನಿ, ಎಡಿಸಿ ಶಿವಾನಂದಮೂರ್ತಿ ಸೇರಿದಂತೆ ಹಲವರು ಇದ್ದರು. ಬಳಿಕ ವಾಹನದಲ್ಲಿ ಪೆಟ್ಟಿಗೆ ಇರಿಸಿ ಮೇಲುಕೋಟೆ ಕಡೆಗೆ ಮೆರವಣಿಗೆ ಆರಂಭಿಸಲಾಯಿತು. ಇಲ್ಲಿಂದ ವೈರಮುಡಿಯು ಭಾರಿ ಭದ್ರತೆಯಲ್ಲಿ ಊರೂರು ಸುತ್ತಿ ಮೇಲುಕೋಟೆ ತಲುಪಲಿದೆ.





