Mysore
16
clear sky

Social Media

ಬುಧವಾರ, 10 ಡಿಸೆಂಬರ್ 2025
Light
Dark

ತುಂಗಭದ್ರಾ ಡ್ಯಾಂ ಗೇಟ್‌ ಕಟ್‌: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಿಯಾಕ್ಷನ್‌

ಮಂಡ್ಯ: ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್‌ ಗೇಟ್‌ ಮುರಿದು ಹೋಗಿರುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಗದ್ದೆಯಲ್ಲಿ ನಾಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀರಿನ ರಭಸಕ್ಕೆ ಗೇಟ್‌ ಕೊಚ್ಚಿಕೊಂಡು ಹೋಗಿದ್ದು, ನದಿಗೆ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರೈತರಿಗೆ ಭಾರೀ ಆತಂಕ ಮನೆಮಾಡಿದೆ.

ಜಲಾಶಯಕ್ಕೆ ಸಾಫ್ಟ್‌ ಲಾಕ್‌ ಅಳವಡಿಸದ ಹಿನ್ನೆಲೆಯಲ್ಲಿ ಈ ಅವಘಡ ಆಗಿದೆ. ಸುಮಾರು 70 ವರ್ಷಗಳ ಹಿಂದೆ ಈ ಡ್ಯಾಂನ್ನು ನಿರ್ಮಾಣ ಮಾಡಲಾಗಿದೆ. ಆದರೆ ಡ್ಯಾಂಗೆ ಸ್ಟಾಫ್ ಲಾಕ್‌ ಗೇಟ್‌ ಅಳವಡಿಸದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದರು.

ಸಾಫ್ಟ್ ಲಾಕ್‌ ಗೇಟ್‌ ಅಳವಡಿಸಿದರೆ ಮಾತ್ರ ಇಂತಹ ಅವಘಡಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಕೆಆರ್‌ಎಸ್‌ ಡ್ಯಾಂಗೂ ಸಾಫ್ಟ್ ಲಾಕ್‌ ಗೇಟ್‌ ಇಲ್ಲ. ತುಂಗಭದ್ರಾ ಡ್ಯಾಂ ಅವಘಡ ನೋಡಿದರೆ ಮುಂದೆ ಹೆಚ್ಚಿನ ಅನಾಹುತ ಆಗುವುದಕ್ಕೂ ಮುನ್ನೆ ಕೆಆರ್‌ಎಸ್‌ಗೆ ಸಾಫ್ಟ್ ಲಾಕ್‌ ಅಳವಡಿಕೆ ಮಾಡಬೇಕು ಎಂದು ಆಗ್ರಹಿಸಿದರು.

ತುಂಗಭದ್ರಾ ಡ್ಯಾಂ ಸಮಸ್ಯೆಗೆ ಸರ್ಕಾರ ನಿರ್ಲಕ್ಷ್ಯ ಎನ್ನಲು ಆಗಲ್ಲ. ಅಧಿಕಾರಿಗಳು ಪದೇ ಪದೇ ಡ್ಯಾಂನ್ನು ಪರಿಶೀಲನೆ ಮಾಡಬೇಕಿತ್ತು. ಆದರೆ ಅವರು ಕಾಟಾಚಾರಕ್ಕೆ ಪರಿಶೀಲನೆ ನಡೆಸಿದ್ದಾರೆ. ಇದರಿಂದ ಈ ಅವಘಡ ಸಂಭವಿಸಿದೆ ಎಂದರು.

Tags:
error: Content is protected !!