Mysore
27
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಮೇಲುಕೋಟೆಯಲ್ಲಿ ವಾಹನ ದಟ್ಟಣೆ ; ನಿಯಂತ್ರಣಕ್ಕೆ ಶಾಸಕರ ಸೂಚನೆ

ಮೇಲುಕೋಟೆ : ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಮತ್ತು ಉತ್ಸವ ಬೀದಿಗಳಲ್ಲಿ ಭಕ್ತರ ವಾಹನ ನಿಲುಗಡೆಯನ್ನು ನಿಯಂತ್ರಿಸಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಅವರಿಗೆ ಸೂಚಿಸಿದರು.

ಮೇಲುಕೋಟೆಯಲ್ಲಿ ಕಾರ್ಯಕ್ರಮಕ್ಕೆ ಬರುತ್ತಿದ್ದ ವೇಳೆ ದೇವಾಲಯದ ಸುತ್ತಮುತ್ತ ಉಂಟಾಗಿದ್ದ ಟ್ರಾಫಿಕ್ ಜಾಮ್ ನಿಂದಾಗಿ ಶಾಸಕರು ಕಾರನ್ನು ಅಲ್ಲೇ ಬಿಟ್ಟು ದ್ವಿಚಕ್ರವಾಹನದಲ್ಲಿ ಸಮಾರಂಭಕ್ಕೆ ಆಗಮಿಸಿದರು. ದೇವಾಲಯದ ಸುತ್ತಮುತ್ತ ಉಂಟಾಗಿದ್ದ ವಾಹನ ದಟ್ಟಣೆಯನ್ನು ಗಮನಿಸಿದ ಶಾಸಕರು ಇನ್ನು ಮುಂದೆ ಶನಿವಾರ ಭಾನುವಾರ ಮತ್ತು ರಜಾದಿನಗಳಂದು ಭಕ್ತರ ವಾಹನದಟ್ಟಣೆಯನ್ನು ನಿಯಂತ್ರಿಸಲು ಪ್ರಾಥಮಿಕ ಆರೋಗ್ಯಕೇಂದ್ರದ ಮುಂಭಾಗ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮೇಲುಕೋಟೆ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಎಸ್‌ಪಿ ಅವರಿಗೆ ಖಡಕ್ ಸೂಚನೆ ನೀಡಿದರು.

ಮಾರ್ಚ್‌ 23ರಿಂದ ವೈರಮುಡಿ ಬ್ರಹ್ಮೋತ್ಸವ
ಮಾರ್ಚ್ 23ರಿಂದ ಏ-4 ರವರೆಗೆ ವೈರಮುಡಿ ಬ್ರಹ್ಮೋತ್ಸವ ನಡೆಯಲಿದ್ದು ನಿತ್ಯ ವಿಶೇಷ ಉತ್ಸವಗಳು ನೆರವೇರುತ್ತವೆ. ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಉತ್ಸವಕ್ಕೆ ಅಡಚಣೆಯಾಗುತ್ತದೆ. ಹಾಗಾಗಿ ಜಾತ್ರೆಯ ಅವಧಿಯಲ್ಲಿ ಉತ್ಸವ ಬೀದಿಗಳಲ್ಲಿ ವಾಹನಗಳು ನಿಲುಗಡೆಯಾಗದಂತೆ ಪೊಲೀಸರು ಕ್ರಮ ವಹಿಸಬೇಕು. ಗ್ರಾಮಪಂಚಾಯಿತಿ ಕೂಡ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದರಲ್ಲದೆ, ಪಾಂಡವಪುರ ಸರ್ಕಲ್ ಇನ್ಸ್‌ಪೆಕ್ಟರ್ ಶರತ್, ಶ್ರೀರಂಗ ಪಟ್ಟಣ ಡಿವೈಎಸ್‌ಪಿ ಹಾಗೂ ಮೇಲುಕೋಟೆ ಪೊಲೀಸರಿಗೂ ಶಾಸಕರು ಸೂಚನೆ ನೀಡಿದರು. ದೇವಾಲಯ, ಕಲ್ಯಾಣಿ , ಯೋಗಾನರಸಿಂಹಸ್ವಾಮಿ ಬೆಟ್ಟ, ರಾಯಗೋಪುರದ ಬಳಿ ರಜಾದಿನಗಳಲ್ಲಿ ವಾಹನದಟ್ಟಣೆ ಉಂಟಾಗಿ ಘರ್ಷಣೆಗೂ ಕಾರಣವಾಗುತ್ತದೆ ಎಂದು ಶಾಸಕರು ತಿಳಿಸಿದರು.

Tags:
error: Content is protected !!