Mysore
32
scattered clouds

Social Media

ಭಾನುವಾರ, 19 ಏಪ್ರಿಲ 2026
Light
Dark

ಬಲಮುರಿ-ಎಡಮುರಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ನಿಷೇಧ ; ವ್ಯಾಪಾರಿಗಳ ಅಸಮಾಧಾನ

ಮಂಡ್ಯ : ಬೇಸಿಗೆ ರಜೆಯ ಸಮಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಮತ್ತು ಎಡಮುರಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧ ನಿರ್ಧಾರಕ್ಕೆ ಸ್ಥಳೀಯ ವ್ಯಾಪಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಈ ಎರಡು ತಾಣಗಳಲ್ಲಿ ನಡೆದ ಸಾವು-ನೋವುಗಳ ಪರಿಣಾಮವಾಗಿ ಮುಂಜಾಗ್ರತಾ ಕ್ರಮವಾಗಿ ಮುಂದಿನ ಆದೇಶದವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಬಲಮುರಿ ಮತ್ತು ಎಡಮುರಿ ಕಾವೇರಿ ನದಿಯ ತೀರದಲ್ಲಿ ಇರುವ ಜನಪ್ರಿಯ ಪ್ರವಾಸಿ ಸ್ಥಳಗಳಾಗಿವೆ. ಬೇಸಿಗೆಯಲ್ಲಿ ವಿಶೇಷವಾಗಿ ಯುವಕರು, ಕುಟುಂಬಗಳು ಮತ್ತು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ನಡೆದ ದುರಂತಗಳು (ಸಾವು ನೋವುಗಳು) ಆತಂಕವುಂಟುಮಾಡಿದ್ದು, ಪರಿಣಾಮ ಪರಿಣಾಮ ನಿರ್ಬಂಧ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ.

ವ್ಯಾಪಾರಿಗಳ ಆಕ್ರೋಶ
ಸ್ಥಳೀಯ ವ್ಯಾಪಾರಿಗಳು ಮತ್ತು ಪ್ರವಾಸೋದ್ಯಮ ಆಧಾರಿತ ವ್ಯವಹಾರ ಮಾಡುವವರು ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದಾರೆ. “ಪ್ರವಾಸಿಗರಿಗೆ ಸುರಕ್ಷಿತ ಪ್ರವೇಶ ಕಲ್ಪಿಸಿ, ಸಾವು-ನೋವುಗಳು ಆಗದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದಿತ್ತು. ಬದಲಿಗೆ ನೇರವಾಗಿ ನಿಷೇಧ ಹೇರಿರುವುದು ಸರಿಯಲ್ಲ ಎಂದು ಸ್ಥಳೀಯ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ.

ಈ ತಾಣಗಳಿಗೆ ಬರುವ ಪ್ರವಾಸಿಗರ ಮೇಲೆ ಅವಲಂಬಿತವಾಗಿರುವ ಚಿಕ್ಕ-ಚಿಕ್ಕ ಅಂಗಡಿಗಳು, ತಿಂಡಿ-ತಿನಿಸು ಮಾರಾಟಗಾರರು, ಬೋಟಿಂಗ್, ಫೋಟೋಗ್ರಫಿ ಮತ್ತು ಇತರ ಸಣ್ಣ ವ್ಯಾಪಾರಿಗಳಿಗೆ ಈ ನಿರ್ಬಂಧ ದೊಡ್ಡ ಹೊಡೆತವಾಗಿದೆ. ಬೇಸಿಗೆ ರಜೆಯ ಸಮಯದಲ್ಲಿ ಉತ್ತಮ ಆದಾಯ ಪಡೆಯುವ ಅವಕಾಶ ಕಳೆದುಕೊಂಡಿದ್ದೇವೆ ಎಂದು ಸ್ಥಳೀಯ ವ್ಯಾಪಾರಿಗಳು ತಮ್ಮ ಅಳಲನ್ನು ತೊಡಿಕೊಂಡರು.

Tags:
error: Content is protected !!