Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಇಂದು

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಿಸೆಂಬರ್ 21 ರಂದು ನಡೆಯುವ ಕಾರ್ಯಕ್ರಮಗಳ ವಿವರ ಇಂತಿದೆ :

ಗೋಷ್ಠಿಗಳು:-

ಬೆಳಿಗ್ಗೆ 9.30 ರಿಂದ 11 ಗಂಟೆಯವರೆಗೆ ಡಿಸೆಂಬರ್ 21 ರಂದು ಸಮಾನಂತರ ವೇದಿಕೆ – 1ರಲ್ಲಿ ಸೃಜನಶೀಲತೆ – ವಿದ್ಯುನ್ಮಾನ ಮಾಧ್ಯಮಗಳ ಸವಾಲುಗಳು ವಿಷಯದ ಬಗ್ಗೆ ಗೋಷ್ಠಿ – 3 ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ರಾಂತ ಕುಲಪತಿಗಳು ಡಾ ಚಿದಾನಂದಗೌಡ ಅವರ ವಹಿಸಲಿದ್ದು, ಹಿರಿಯ ಮಾಧ್ಯಮ ತಜ್ಞ ಜಿ ಎನ್ ಮೋಹನ್ ಅವರು ಆಶಯ ನುಡಿ ನುಡಿಯಲಿದ್ದಾರೆ.

ಕೃತಕ ಬುದ್ಧಿಮತ್ತೆ ಹಾಗೂ ಚಾಟ್ ಜಿ ಪಿ ಟಿ ಸೃಷ್ಟಿಸಿರುವ ಸವಾಲುಗಳು – ವಿಷಯದ ಬಗ್ಗೆ ಮಧು ವೈ ಎನ್ ಅವರು, ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಜಾಲತಾಣಗಳು – ಓಂ ಶಿವಪ್ರಕಾಶ್, ತಂತ್ರಜ್ಞಾನ ಯುಗದಲ್ಲಿ ಕನ್ನಡದ ಅನುಸಂಧಾನ – ಶಂಕರ ಸಿಹಿಮೊಗ್ಗೆ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಡಾ ರವೀಂದ್ರನಾಥ ಎಸ್ ಹೊಸಮನಿ, ಸ್ವಾಗತ – ಮಡ್ಡಿಕೆರೆ ಗೋಪಾಲ್, ನಿರೂಪಣೆ – ರುದ್ರೇಶ್, ವಂದನಾರ್ಪಣೆ – ಬಿ ಟಿ ನಾಗೇಶ್ ಅವರು ನೆರವೇರಿಸಲಿದ್ದಾರೆ.

ಗೋಷ್ಠಿ – 4 :
ಬೆಳಿಗ್ಗೆ 11 ರಿಂದ 12:30 ಗಂಟೆಯವರೆಗೆ ದಲಿತ ಸಾಹಿತ್ಯದ ನೆಲೆಗಳು ವಿಷಯದ ಬಗ್ಗೆ ಗೋಷ್ಠಿ – 4 ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು ಮೂಡ್ನಕೂಡು ಚಿನ್ನಸ್ವಾಮಿ ಅವರು ವಹಿಸಲಿದ್ದು, ದಲಿತ ಸಂಘಟನೆಗಳ ಅಸ್ಮಿತೆ ವಿಷಯದ ಬಗ್ಗೆ – ಡಾ ಎಂ ವೆಂಕಟಸ್ವಾಮಿ, ದಲಿತ ಬಂಡಾಯ ಸಾಹಿತ್ಯ ಐದು ದಶಕಗಳ ಸಾಧಕ-ಬಾಧಕಗಳು – ಡಾ. ವೈ.ಬಿ. ಹಿಮ್ಮಡಿ, ಕನ್ನಡ ಸಂವರ್ಧನೆಯಲ್ಲಿ ತಳ ಸಮುದಾಯಗಳ ಪಾತ್ರ – ಪ್ರೊ. ಚೆಲುವರಾಜು, ದಲಿತ ಸಾಹಿತ್ಯ ಚಳವಳಿ ಮತ್ತು ಮಹಿಳೆ – ಡಾ. ಜಯದೇವಿ ಗಾಯಕವಾಡ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಸು. ಜಗದೀಶ್, ಸ್ವಾಗತ – ಹಾಸಿಂಪೀರ್ ವಾಲೀಕಾರ್, ನಿರೂಪಣೆ – ಬಸವರಾಜ ಕಲ್ಲುಸಕ್ಕರೆ, ವಂದನಾರ್ಪಣೆಯನ್ನು ಚಂದ್ರಶೇಖರ ಸಿಹಾರ್ ಅವರು ನೆರವೇರಿಸಲಿದ್ದಾರೆ.

ಗೋಷ್ಠಿ – 5 :
ಮಧ್ಯಾಹ್ನ 12:30 ರಿಂದ 2 ಗಂಟೆಯವರೆಗೆ ಕರ್ನಾಟಕ – ಪ್ರಕೃತಿ ವಿಕೋಪದ ಆತಂಕಗಳು ವಿಷಯದ ಬಗ್ಗೆ ಗೋಷ್ಠಿ 5 ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಅ.ನಾ. ಯಲ್ಲಪ್ಪರೆಡ್ಡಿ ಹಿರಿಯ ಪರಿಸರವಾದಿಗಳು, ಆಶಯ ನುಡಿ : ಡಾ. ವಿ.ಎಸ್. ಪ್ರಕಾಶ್ ಪರಿಸರ ತಜ್ಞರು ನೆರವೇರಿಸಲಿದ್ದಾರೆ.

ಕರ್ನಾಟಕದಲ್ಲಿನ ಭೂಕುಸಿತ ಪ್ರಕರಣಗಳು – ಡಾ. ಮಾರುತಿ, ಅಕಾಲಿಕ ಮಳೆ ಮತ್ತು ವಾಯುಭಾರ ಕುಸಿತ ಪ್ರಕರಣಗಳು ಡಾ. ಕೇಶವ ಕೂರ್ಸೆ, ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳು – ಡಾ. ಟಿ.ಆರ್. ಅನಂತರಾಮು, ಪ್ರಕೃತಿ ವಿಕೋಪಗಳು – ಡಾ. ಜಿ.ಎಸ್. ಶ್ರೀನಿವಾಸರೆಡ್ಡಿ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಜಿ. ರುದ್ರಯ್ಯ, ಸ್ವಾಗತ – ಡಾ ಅಮರೇಶ ಯತಗಲ್, ನಿರೂಪಣೆ – ಮೆಹಬೂಬ್ ಹುಸೇನ್, ವಂದನಾರ್ಪಣೆ – ಡಿ ಚಂದ್ರು ಅವರು ನೆರವೇರಿಸಲಿದ್ದಾರೆ.

ಗೋಷ್ಠಿ – 6 :
ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಶತಮಾನೋತ್ಸವ ವರ್ಷದ ಕನ್ನಡ ಲೇಖಕರು ವಿಷಯದ ಬಗ್ಗೆ ಗೋಷ್ಠಿ – 6 ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಮಲ್ಲೇಪುರಂ ಜಿ. ವೆಂಕಟೇಶ ಹಿರಿಯ ವಿದ್ವಾಂಸರು ವಹಿಸಲಿದ್ದು, ಎಲ್.ಎಸ್. ಶೇಷಗಿರಿರಾವ್ ವಿಷಯದ ಬಗ್ಗೆ – ಡಾ. ವನಮಾಲ ವಿಶ್ವನಾಥ, ನಿರಂಜನ – ಮಲ್ಲಿಕಾರ್ಜುನ ಹೆಗ್ಗಳಿಗೆ, ಕು.ಶಿ. ಹರಿದಾಸಭಟ್ಟ – ಪ್ರೊ. ಚಿತ್ರಪಾಡಿ ಉಪೇಂದ್ರ ಸೋಮಯಾಜಿ, ಶಾಂತರಸ – ಡಾ. ಅಕ್ಟರ್ ಕಾಲಿಮಿರ್ಚಿ, ಜಿ.ಎಸ್. ಆಮೂರ – ಶ್ಯಾಮಸುಂದರ ಬಿದರಕುಂದಿ, ವಿಜಯ ಭಾಸ್ಕರ್ – ಎಸ್.ಆರ್. ರಾಮಕೃಷ್ಣ ಅವರು ವಿಷಯ ಮಂಡನೆ ಮಾಡಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಮುತ್ತುರಾಜ್, ಸ್ವಾಗತ ಸಿ ಅಪೂರ್ವಚಂದ್ರ, ನಿರೂಪಣೆ – ಕೋಗಲೂರು ತಿಪ್ಪೇಸ್ವಾಮಿ, ವಂದನಾರ್ಪಣೆ – ಸುನಿಲ್ ಕುಮಾರ್ ಕೆ ಎಸ್ ಅವರು ನೆರವೇರಿಸಲಿದ್ದಾರೆ.

ಗೋಷ್ಠಿ – 7 :
ಸಂಜೆ 4 ರಿಂದ 6:00 ಗಂಟೆಯವರೆಗೆ ಕವಿ ಗೋಷ್ಠಿ – 3 ರ ಗೋಷ್ಠಿ – 7 ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ ಪ್ರದೀಪ್ ಕುಮಾರ್ ಹೆಬ್ರಿ ಅವರು ವಹಿಸಲಿದ್ದು, ಸಾಹಿತಿ ಡಾ ರವಿ ಬೆಸಗರಹಳ್ಳಿ ಅವರು ಆಶಯ ನುಡಿ ನುಡಿಯಲಿದ್ದಾರೆ. ಕವಿಗಳಾದ ಡಾ. ಹಾ.ಮಾ. ನಾಗಾರ್ಜುನ, ಡಾ. ಶರೀಫ್ ಹಸಮಕಲ್, ಸಂತೋಷ ಎಸ್. ಕರಹರಿ, ನಾಗೇಶ ಜೆ. ನಾಯಕ, ರವೀಂದ್ರ ಸಿಂಗ್, ವನಜಾ ಸುರೇಶ್, ರೇವಣಸಿದ್ದಪ್ಪ ಜಿ.ಆ‌ರ್, ಸುಬ್ರಾಯ ಬಿದ್ರಮನೆ, ಡಾ. ಸೋಮಲಿಂಗಪ್ಪ ಚಿಕ್ಕಳ್ಳವರ, ಡಾ. ಎಂ.ಎಸ್. ರಘುನಂದನ, ರಮ್ಯ ಕೆ.ಜಿ, ಯೋಗೀಶ್ ಲಮಾಣಿ, ಗಂಗಾಧರ ಪತ್ತಾರ, ಚಂದಕಚರ್ಲ ರಮೇಶ್ ಬಾಬು, ಚಲಪತಿಗೌಡ ಪಾ.ಮಂ, ಶಿಲ್ಪಾ ರಮೇಶ ಕುರಿ, ಬಾಬು ಕೊರಗ (ಕೊರಗ ಭಾಷೆ), ಸದಾನಂದ ಮುಂಡಾಜೆ, ಡಾ. ಶ್ರೀಶೈಲ್ ಎನ್. ಪೂಜಾರಿ, ರುದ್ರಮ್ಮ ಅಮರೇಶ, ಎನ್. ಬಸವರಾಜು, ದೋ.ಚಿ. ಗೌಡ, ರವಿಕುಮಾರ ಎನ್, ಡಾ. ವಸಂತ ಎಸ್. ಬಾಂದೇಕರ (ಕೊಂಕಣಿ ಭಾಷೆ), ಶರಣಯ್ಯ ಹಿರೇಮಠ ಅವರು ಕವಿಗೋಷ್ಠಿ ನಡೆಸಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆ – ಮಂಜುಳಾ ಗುಪ್ತ, ಸ್ವಾಗತ – ಡಾ ಸಿ ರಾಮಲಿಂಗೇಶ್ವರ (ಸಿಸಿರಾ), ನಿರೂಪಣೆ – ಪ್ರಭಾ ನಾರಾಯಣಗೌಡ, ವಂದನಾರ್ಪಣೆ – ಸಿಡದರಗಲ್ಲು ರಂಗನಾಥ ಅವರು ನೆರವೇರಿಸಲಿದ್ದಾರೆ.

Tags: