Mysore
16
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಬಿಜೆಪಿಗರ ಪ್ರತಿಭಟನೆಯ ಅಸೂಯೆಗೆ ಮದ್ದಿಲ್ಲ : ಡಿಕೆಶಿ

ಮಂಡ್ಯ : ರಾಜ್ಯ ಬಜೆಟ್‌ನ್ನು ಹಲಾಲ್‌ ಬಜೆಟ್‌ ಎಂದು ಆರೋಪಿಸಿ ಬಜೆಟ್ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಅಸೂಯೆಯಿಂದ ಕೂಡಿದ್ದು, ಇದಕ್ಕೆ ಮದ್ದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದರು.

ಮಳವಳ್ಳಿಯ ಖಾಸಗಿ ಕಾರ್ಯಕ್ರಮಕ್ಕೆ ಭಾನುವಾರ ಬೇಟಿ ನೀಡಿದ್ದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಗ್ಗೆ ಗೌರವ, ಸ್ವಾಭಿಮಾನ ಇದ್ದರೆ ಕೇಂದ್ರ ಸರ್ಕಾರವ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ತಿರುಗೇಟು ನೀಡಿದರು.

ನಾವು ಈ ಬಾರಿ 4 ಲಕ್ಷ ಕೋಟಿ ಗಾತ್ರದ ಬಜೆಟ್‌ ಕೊಟ್ಟಿದ್ದೇವೆ. ಬಡವರ ಬದುಕು ಬದಲಾವಣೆ ಮಾಡಲು ಪಂಚ ಗ್ಯಾರಂಟಿಗಳನ್ನು ನೀಡಿದ್ದೇವೆ. ಬಿಜೆಪಿಗೆ ಹೃದಯ ಶ್ರೀಮಂತಿಕೆ ಇಲ್ಲ. ಸಮಾಜವನ್ನು ಒಡೆಯುತ್ತಿದ್ದಾರೆ. ಆದರೆ, ನಾವು ಹಿಂದುಳಿದವರನ್ನು ಮೇಲಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಬಿಜೆಪಿಯವರು ಔಷಧ ತೆಗೆದುಕೊಂಡು ಹೊಟ್ಟೆಹುರಿ ಕಡಿಮೆ ಮಾಡಿಕೊಳ್ಳಲಿ ಎಂದು ಹೇಳಿದರು.

Tags:
error: Content is protected !!