ಮಂಡ್ಯ : ವಿಸಿ ನಾಲೆಯಲ್ಲಿ ಬಾಲಕ ಕೊಚ್ಚಿ ಹೋದ ಪ್ರಕರಣ, 17 ಗಂಟೆ ಬಳಿಕ ಬಾಲಕನ ಮೃತದೇಹ ಪತ್ತೆಯಾಗಿದೆ.
ಮಂಡ್ಯ ತಾಲೂಕಿನ ಹೊನಗಾನಹಳ್ಳಿ ಮಠ ಗ್ರಾಮದಲ್ಲಿ ನಿನ್ನೆ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾಲೆಯಲ್ಲಿ ಸಬಿನ್ ರಾಜ್ (4) ಕೊಚ್ಚಿ ಹೋಗಿದ್ದ. ಬಾಲಕನಿಗಾಗಿ ಅಗ್ನಿ ಶಾಮಕದಳ ಸಿಬ್ಬಂದಿ ನಿನ್ನೆ ಸಂಜೆಯಿಂದ ರಾತ್ರಿ ೯ರ ವರೆಗೆ ಶೋಧ ಕಾರ್ಯ ನಡೆಸಿದ್ದರೂ ಕೂಡ ಬಾಲಕನ ಮೃತದೇಹ ಪತ್ತೆಯಾಗಲಿಲ್ಲ. ಹೀಗಾಗಿ ರಾತ್ರಿ ಶೋಧಕಾರ್ಯವನ್ನ ಸ್ಥಗಿತಗೊಳಿಸಲಾಗಿತ್ತು.
ಇಂದು ನಾಲೆಯಲ್ಲಿ ಸಂಪೂರ್ಣವಾಗಿ ನೀರು ನಿಲ್ಲಿಸಿದ್ರಿಂದ ಬೆಳಿಗ್ಗೆ ಮತ್ತೆ ಶೋಧ ನಡೆಸಿದ ಸಿಬ್ಬಂದಿಗೆ ನಾಲೆಗೆ ಬಿದ್ದಿದ್ದ ಸ್ವಲ್ಪ ದೂರದಲ್ಲೇ ಬಾಲಕನ ಶವ ಪತ್ತೆಯಾಗಿದೆ. ಇನ್ನು ಬಾಲಕನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂಧನ ಮುಗಿಲುಮುಟ್ಟಿದೆ.
ಈ ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.