Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಲೋಕಾಯುಕ್ತ ಬಲೆಗೆ ಬಿದ್ದ ತಾಲ್ಲೂಕು ಕಚೇರಿ ನೌಕರ

ಮದ್ದೂರು : ರೈತರಿಂದ ಲಂಚ ಸ್ವೀಕರಿ ಸುತ್ತಿದ್ದಾಗ ತಾಲೂಕು ಕಚೇರಿಯ ನೌಕರ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಮದ್ದೂರಿನಲ್ಲಿ ನಡೆದಿದೆ.

ಪಟ್ಟಣದ ತಾಲೂಕು ಕಚೇರಿಯ ಹಕ್ಕು ದಾಖಲಾತಿ ತಿದ್ದುಪಡಿ (ಆರ್ ಆರ್ ಟಿ) ಶಾಖೆಯ ಮಂಜುನಾಥ್ ಲೋಕಾಯುಕ್ತ ಬಿದ್ದಿದ್ದು, ಈತನನ್ನು ವಶಕ್ಕೆ ಪಡೆಯಲಾಗಿದೆ.ತಾಲೂಕಿನ ಬಿದರ ಮೇಳೆ ಕೊಪ್ಪಲು ಗ್ರಾಮದ ಮೋಹನ್ ರ ಜಮೀನು ವಿವಾದ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿದ್ದು, ಅದರ ತುರ್ತು ವಿಲೇವಾರಿಗಾಗಿ ಮಂಜುನಾಥರ ಬಳಿ ಹೋಗಿದ್ದಾಗ ಹಣ ನೀಡಬೇಕಾಗುತ್ತದೆ ಎಂದು ಹೇಳಿದ್ದರು.

ಬಿದರ ಮೇಳೆಕೊಪ್ಪಲು ಗ್ರಾಮದ ಸರ್ವೇ ನಂಬರ್ 226 ಜಮೀನಿನ ವಿವಾದ ಉಪ ವಿಭಾಗಾಧಿಕಾರಿ ಕೋರ್ಟ್ ನಲ್ಲಿರುವ ಪ್ರಕರಣ ಇದಾಗಿದ್ದು, ಈ ಸಂಬಂಧ ಹಣ ಕೇಳಿದ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ಮೋಹನ್ ದೂರು ಸಲ್ಲಿಸಿದ್ದರು.ಅದರಂತೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದು, ತಾಲೂಕು ಕಚೇರಿಯ ಹೊರಭಾಗದಲ್ಲಿ ಅಂಗಡಿ ಮಳಿಗೆ ಬಳಿ ಮೋಹನ್ ರವರಿಂದ 10000 ರೂ ಹಣ ಪಡೆಯುತ್ತಿದ್ದಾಗ ಮಂಜುನಾಥ್ ಲೋಕಾಯುಕ್ತ ವಶಕ್ಕೆ ಸಿಕ್ಕಿ ಬಿದ್ದಿದ್ದಾರೆ.

ಲೋಕಾಯುಕ್ತ ಎಸ್.ಪಿ ಸುಜಿತ್ ರವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಡಿವೈಎಸ್ ಪಿ ಸುನಿಲ್ ಕುಮಾರ್, ಇನ್ ಸ್ಪೆಕ್ಟರ್ ಪ್ರಕಾಶ್, ಸಿಬ್ಬಂದಿಗಳಾದ ಶಂಕರ್, ಶರತ್,ಮಹಾದೇವಯ್ಯ ,ಮಹಾದೇವಸ್ವಾಮಿ, ನಂದೀಶ್ ,ಯೋಗೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ