ಮದ್ದೂರು : ಗಣೇಶ ಮೆರವಣಿಗೆ ವೇಳೆ ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಅವರು ಮುಸ್ಲಿಂ ಮುಖಂಡರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮದ್ದೂರಿನ ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಆದಿಲ್ ಖಾನ್ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪ್ರಕರಣ ದಾಖಲು ಮಾಡುವುದಾಗಿ ಭರವಸೆ ನೀಡಿದರು.
ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಽಸಿದಂತೆ ಇತ್ತೀಚೆಗೆ ನಡೆದಿದ್ದ ಪ್ರಗತಿಪರರ ಸಭೆಯಲ್ಲಿ ಹೋರಾಟಕ್ಕೆ ತನು, ಮನ ಧನ ಸಹಾಯ ಮಾಡುತ್ತೇನೆಂದು ಮುಸ್ಲಿಂ ಮುಖಂಡ ಆದಿಲ್ ಖಾನ್ ತಿಳಿಸಿದ್ದರು. ಸಭೆಯಲ್ಲಿ ಹೇಳಿಕೆ ನೀಡಿದ್ದ ವಿಡಿಯೋ ವೈರಲ್ಲಾಗಿದ್ದು, ಈ ಹೇಳಿಕೆ ಕೋಮುಗಲಭೆಗೆ ಎಡೆ ಮಾಡಿಕೊಡುವ ಪ್ರಚೋದನಾಕಾರಿ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗಲಾಟೆ ಬಳಿಕ ತಮ್ಮ ಸುಮದಾಯದವರು ಮಾಡಿದ್ದ ತಪ್ಪಿನಿಂದಾಗಿ ಗಲಭೆಗೆ ಕಾರಣವಾಯಿತು ಎಂದು ಆದಿಲ್ ಖಾನ್ ಸಭೆಯಲ್ಲಿ ಕ್ಷಮೆ ಯಾಚಿಸಿದ್ದರು. ನಂತರ ಪ್ರಗತಿಪರರ ಜೊತೆ ಸೇರಿ ಉಲ್ಟಾ ಹೊಡೆದು ಪ್ರತಿಭಟನೆ ಮಾಡಿ ತಮ್ಮ ಸಮುದಾಯದಿಂದ ಆರ್ಥಿಕ ಸಹಾಯ ಮಾಡುತ್ತೇನೆಂದು ಹೇಳಿದ್ದಾರೆ. ಮತೀಯ ಸಂಘರ್ಷಕ್ಕೆ ಕಾರಣವಾದ ಹೇಳಿಕೆ ಕೊಟ್ಟಿರುವ ಆದಿಲ್ ಖಾನ್‌ನನ್ನು ಬಂಽಸಬೇಕು. ಕೋಮು ಗಲಭೆಗೆ ಕಾರಣರಾದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ಕೆ. ಸತೀಶ್, ವಕೀಲರಾದ ಮಲ್ಲೇಶ್, ನೈದಿಲೆಚಂದ್ರು, ಸಂತೋಷ್, ಎಂ.ಸಿ.ಸಿದ್ದು, ಶಂಕರೇಗೌಡ, ರವಿ, ಯೋಗಾನಂದ ಇತರರಿದ್ದರು.





