ಮಂಡ್ಯ: ರಜೆ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದಿದ್ದ ಸೈನಿಕ ರಾಘವೇಂದ್ರ ರಕ್ಷಣಾ ಇಲಾಖೆ ಸೇನಾಧಿಕಾರಿಗಳ ತುರ್ತು ಕರೆ ಮೇರೆಗೆ ಕರ್ತವ್ಯಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳು ಅಭಿನಂದಿಸಿ, ಕಳುಹಿಸಿದರು.
ಮೂಲತಃ ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ ಗ್ರಾಮದ ಸುಬ್ಬೇಗೌಡ ಹಾಗೂ ನಿಂಗಮ್ಮ ದಂಪತಿಯ ಎರಡನೇ ಪುತ್ರ ರಾಘವೇಂದ್ರ ಎಂಬವರು ರಜೆ ಮೇರೆಗೆ ಸ್ವಗ್ರಾಮಕ್ಕೆ ಬಂದಿದ್ದರು. ತುರ್ತು ಕರೆ ಮೇರೆಗೆ ಅವರನ್ನು ನಿಯೋಜಿಸಿರುವ ಜಮ್ಮು ಕಾಶ್ಮೀರದ ಗಡಿ ಭಾಗ ಲಡಾಕ್‌ಗೆ ತೆರಳಿದರು. ಈ ವೇಳೆ ಬಡಾವಣೆ ಮುಖಂಡರಾದ ಅಶೋಕ್, ಗೋವಿಂದರಾಜು, ಕೃಷ್ಣಪ್ಪ, ರಾಮಲಿಂಗಯ್ಯ, ಮಹದೇವಸ್ವಾಮಿ, ನಟರಾಜು, ಕುಮಾರ್, ಕೆಂಪರಾಜು, ವೆಂಕಟರಾಮು, ರಾಘು, ಕಿರಣ್, ಲತಾ, ಸುನೀತಾ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು.





