Mysore
15
overcast clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ದ್ವಿತೀಯ ಪಿಯುಸಿ ಪರೀಕ್ಷೆ: ಮಂಡ್ಯ ಮೂಲದ ವಿದ್ಯಾರ್ಥಿನಿ ವಾಣಿಜ್ಯದಲ್ಲಿ ರಾಜ್ಯಕ್ಕೆ ಪ್ರಥಮ

ತುಮಕೂರು: ನಗರದ ವಿದ್ಯಾನಿಧಿ ಕಾಲೇಜಿನ ಎಂ. ಜ್ಞಾನವಿ ಎಂಬ ವಿದ್ಯಾರ್ಥಿನಿ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ 600ಕ್ಕೆ 597 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಾಧನೆ ಮಾಡಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೀಚನಹಳ್ಳಿ ಗ್ರಾಮದ ಡಿಎಲ್‌ ಮಂಜುನಾಥ್‌ ಹಾಗೂ ಡಿ ಮಂಜುಳಾ ದಂಪತಿಯ ಪುತ್ರಿ ಜ್ಞಾನವಿ ತುಮಕೂರಿನ ವಿದ್ಯಾನಿಧಿ ಕಾಲೇಜು ಹಾಸ್ಟೆಲ್‌ನಲ್ಲಿದ್ದುಕೊಂಡು ವ್ಯಾಸಂಗ ಮಾಡಿದ್ದು, ಪ್ರಥಮ ಪಿಯುಸಿಯಲ್ಲಿ 600ಕ್ಕೆ 600 ಅಂಕವನ್ನು ಗಳಿಸಿದ್ದರು.

ಇನ್ನು ಜ್ಞಾನವಿಯ ಪೋಷಕರು ಬೀಚನಹಳ್ಳಿಯಲ್ಲಿ ಹೊಟೇಲ್‌ ನಡೆಸುತ್ತಿದ್ದಾರೆ. ಫಲಿತಾಂಶ ಹೊರಬಿದ್ದ ಬಳಿಕ ಮಾತನಾಡಿದ ಜ್ಞಾನವಿ ʼಹಾಸ್ಟೆಲ್‌ನಲ್ಲಿ ಇದ್ದುಕೊಂಡು ಅಭ್ಯಾಸ ಮಾಡಿದ್ದು ನೆರವಾಯಿತು. ಯಾವುದೇ ಒಂದು ವಿಷಯವನ್ನು ಓದಲು ಕುಳಿತರೆ ಅದು ಪೂರ್ತಿಯಾಗುವ ತನಕ ಬಿಡುತ್ತಿರಲಿಲ್ಲ. ಸಾಮಾಜಿಕ ಜಾಲತಾಣದ ಹಾಗೂ ಮೊಬೈಲ್‌ನಿಂದ ನಾನು ದೂರ ದೂರ. ಫಲಿತಾಂಶ ನೋಡಿ ತುಂಬಾ ಖುಷಿಯಾಗಿದೆ. ಮನೆಯಲ್ಲಿ ಹಬ್ಬದ ವಾತಾವರಣ ಇದೆʼ ಎಂದು ಹೇಳಿಕೊಂಡರು.

Tags:
error: Content is protected !!