ಮಂಡ್ಯ: ಜಲಜೀವನ್ ಮಿಷನ್ ಯೋಜನೆಯಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಮತ್ತು ಕಾಮಗಾರಿಗಳ ಪ್ರಸ್ತುತ ಸ್ಥಿತಿ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯಿತಿ ಸಿಒಓ ನಂದಿನಿ ಅವರು ಕಾರ್ಯಪಾಲಕ ಅಭಿಯಂತರರಿಂದ ಮಾಹಿತಿ ಪಡೆದರು.
ಮಂಡ್ಯ ತಾಲ್ಲೂಕಿನ ಹನಕೆರೆ, ಮದ್ದೂರು ತಾಲ್ಲೂಕಿನ ಗುಡಿಗೆರೆ ಹಾಗೂ ಯಲಾದಹಳ್ಳಿ ಹಾಗೂ ಮಳವಳ್ಲೀ ತಾಲ್ಲೂಕಿನ ಕೆಂಬೂತಗೆರೆ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
ಪೈಪ್‌ಲೈನ್ ಅಳವಡಿಸಲು ಕತ್ತರಿಸಲಾಗಿರುವ ರಸ್ತೆ ಭಾಗವನ್ನು ಸರಿಯಾದ ರೀತಿಯಲ್ಲಿ ಮುಚ್ಚಿಲ್ಲದಿರುವುದರಿಂದ ಅನೇಕ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಅಭಿಯಂತರುಗಳು ಕೂಡಲೇ ಕ್ರಮಗಳನ್ನು ತೆಗೆದುಕೊಂಡು ಪೈಪ್‌ಲೈನ್ ಅಳವಡಿಸಲು ಕತ್ತರಿಸಿರುವ ಭಾಗವನ್ನು ಎಸ್‌ಓಪಿಯಂತೆ ಮರುಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.




