Mysore
19
few clouds

Social Media

ಭಾನುವಾರ, 16 ಮಾರ್ಚ್ 2025
Light
Dark

ಮಂಡ್ಯ| ಬಸ್ ತಡೆದು ಪ್ರತಿಭಟನೆ

ಮಂಡ್ಯ: ಇಲ್ಲಿನ ಕೊಪ್ಪದಿಂದ ಮಾರಗೌಡನಹಳ್ಳಿ ಕೆರಗೋಡು ಮಾರ್ಗವಾಗಿ ಮಂಡ್ಯಕ್ಜೆ ತೆರಳುವ ಬಸ್ಸನ್ನು ಕೋಡಿದೊಡ್ಡಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ತಡೆದು ಪ್ರತಿಭಟನೆ ನಡೆಸಿದರು.

ಕೋಡಿದೊಡ್ಡಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಕೊಪ್ಪದಿಂದ ಬೆಳಿಗ್ಗೆ 8:45 ಮಂಡ್ಯಗೆ ಹೊರಡುವ ಬಸ್ಸು ಮುಡಲುದೊಡ್ಡಿ ಗ್ರಾಮದ ಮಾರ್ಗವಾಗಿ ತೆರಳುತ್ತಿದೆ. ಇದರಿಂದ ಕೋಡಿದೊಡ್ಡಿಯ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಇಂದು ಬಸ್ ತಡೆದು ಪ್ರತಿಭಟನೆ ನಡೆಸಿದರು.

ಬಳಿಕ ಈ ವಿಚಾರದ ಕುರಿತು ವಾಹನ ನಿಯಂತ್ರಕ ಮಂಡ್ಯ ಡಿಪೋ ಮ್ಯಾನೇಜರ್ ಗಮನಕ್ಕೆ ತಂದಿದ್ದು, ಮುಂದಿನ ಸೋಮವಾರದಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಪೋ ಮ್ಯಾನೇಜರ್ ಭರವಸೆ ನೀಡಿದ್ದಾರೆ. ಡಿಪೋ ಮ್ಯಾನೇಜರ್‌ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟಿದ್ದಾರೆ.

 

Tags: