Mysore
24
overcast clouds

Social Media

ಗುರುವಾರ, 01 ಜನವರಿ 2026
Light
Dark

ರಾಜ್ಯಾದ್ಯಾಂತ ಮಾ.8ರಂದು ರಾಷ್ಟ್ರೀಯ ಲೋಕ-ಅದಾಲತ್‌

ಮಂಡ್ಯ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಜ್ಯಾದ್ಯಾಂತ ಮಾ.8ರಂದು ರಾಷ್ಟ್ರೀಯ ಲೋಕ-ಅದಾಲತ್‌ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಆನಂದ್‌.ಎಂ ಅವರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಬರುವಂತಹ 7 ತಾಲೂಕುಗಳಲ್ಲಿಯೂ ಸಹ ಲೋಕ್‌-ಅದಾಲತ್‌ ಮುಖಾಂತರ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಪೂರ್ವಭಾವಿ ಭೈಠೆಕ್‌ಗಳನ್ನು ನಡೆಸಲಾಗುತ್ತಿದೆ ಎಂದರು.

ರಾಷ್ರೀಯ ಲೋಕ ಅದಾಲತ್‌ನಲ್ಲಿ ಆಸ್ತಿ ವಿವಾದಗಳನನ್ನು ಒಳಗೊಂಡಂತೆ ಸಿವಿಲ್‌ ವ್ಯಾಜ್ಯಗಳು, ಹಣ ವಸೂಲಾತಿ ದಾವೆಗಳು, ಮೋಟಾರ್‌ ವಾಹನ ಪ್ರಕರಣಗಳು, ಜೀವನಾಂಶ ಪ್ರಕರಣ, ದಾಂಪತ್ಯ ಪುನರ್‌ ಸ್ಥಾಪನೆ ಪ್ರಕರಣಗಳು ಎಲ್ಲವನ್ನು ಆಯಾ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಲೋಕ-ಅದಾಲತ್‌ ನ್ಯಾಯಾಲಯಗಳಲ್ಲಿ ಬಾಕಿ ಇರುವಂತಹ ಪ್ರಕರಣಗಳು ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಉಭಯ ಪಕ್ಷಗಾರರಿಗೆ ನೋಟಿಸ್‌ ನೀಡಿ ಕರೆಸಿ ಪ್ರಾಧಿಕಾರದ ವತಿಯಿಂದ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ಕೊಳ್ಳಬಹುದು ಎಂದರು.

ಜನಸಾಮನ್ಯರು ಇದರ ಸದುಪಯೋಗ ಪಡೆದು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ಲೋಕ-ಅದಾಲತ್‌ನ್ನು ಯಶಸ್ವಿಗೊಳಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

Tags:
error: Content is protected !!