Mysore
24
scattered clouds

Social Media

ಗುರುವಾರ, 13 ನವೆಂಬರ್ 2025
Light
Dark

ನಾಗಮಂಗಲ ಗಲಭೆ ಪ್ರಕರಣ: ಸರ್ಕಾರದ ವಿರುದ್ಧ ಅಶ್ವಥ್‌ ನಾರಾಯಣ್‌ ಆಕ್ರೋಶ

ಮಂಡ್ಯ: ನಾಗಮಂಗಲದಲ್ಲಿ ಗಲಭೆ ನಡೆಸಿದವರನ್ನು ಬಿಟ್ಟು ಗಣೇಶ ಕೂರಿಸಿದವರನ್ನು ಬಂಧಿಸಲಾಗಿದೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್‌ ಕಿಡಿಕಾರಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಚುನಾವಣೆಯ ಹಿನ್ನೆಲೆಯಲ್ಲಿ ದ್ವೇಷ ರಾಜಕಾರಣ ಮಾಡುತ್ತಿರುವುದು ಕಂಡು ಬಂದಿದೆ.

ನಾಗಮಂಗಲ ಗಲಾಟೆ ಪ್ರಕರಣದ ಹಿಂದೆ ಪಿಎಫ್‌ಐ ಕೈವಾಡ ಇರುವ ಮಾಹಿತಿ ಇದ್ದು, ಅಲ್ಲಿ ಪಾಕ್‌ ಪರ ಘೋಷಣೆ ಕೂಗಿದ ಬಗ್ಗೆಯೂ ಮಾಹಿತಿ ಬಂದಿದೆ.

ಪ್ರಕರಣ ಹಿಂದೆ ಯಾರೆಲ್ಲಾ ಇದ್ದಾರೆ, ಕುಮ್ಮಕ್ಕು ನೀಡಿರುವುದು ಯಾರು. ಇದೆಲ್ಲವನ್ನು ಸಂಪೂರ್ಣವಾಗಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.

ಬಿಜೆಪಿ ಸತ್ಯಶೋಧನಾ ತಂಡ ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದೆ. ಗಲಭೆ ಬಗ್ಗೆ ಸಮಗ್ರ ವರದಿ ಸಂಗ್ರಹಿಸಿ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದರು.

Tags:
error: Content is protected !!