Mysore
27
haze

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ನಾಗಮಂಗಲ: ಅಪಘಾತದಲ್ಲಿ ಪತ್ರಕರ್ತ ಸಾವು

ಮಂಡ್ಯ: ಜಿಲ್ಲೆ ನಾಗಮಂಗಲ ಸಮೀಪ ಶುಕ್ರವಾರ(ಜು.16) ಸಂಜೆ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿರಿಯ ಪತ್ರಕರ್ತ ಬಿ.ಸಿ.ಮೋಹನಕುಮಾರ್ (50) ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಆಂದೋಲನ, ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಯಲ್ಲಿ ವರದಿಗಾರರಾಗಿ ಬಿ.ಸಿ.ಮೋಹನ ಕುಮಾರ್ ಅವರು ಕೆಲಸ ನಿರ್ವಹಿಸಿದ್ದರು. ಮೃತರು ನಾಗಮಂಗಲ ತಾಲೂಕಿನ ಬ್ಯಾಡರಹಳ್ಳಿಯವರಾಗಿದ್ದು, ಪತ್ನಿ, ಬಂಧು ಬಳಗ ಸೇರಿದಂತೆ ಸ್ನೇಹ ಬಳಗವನ್ನು ಅಗಲಿದ್ದಾರೆ.

ಮೃತ ಮೋಹನ್ ಅವರಿಗೆ ಜಿಲ್ಲಾ ಸಚಿವರ ಸಂತಾಪ.

ರಸ್ತೆ ಅಪಘಾತದಲ್ಲಿ ನಾಗಮಂಗಲದ ಪತ್ರಕರ್ತರಾದ ಬಿ.ಸಿ.ಮೋಹನ್ ಕುಮಾರ್ ಅವರು ಮೃತಪಟ್ಟ ಸುದ್ದಿ ತಿಳಿದು ಆಘಾತವಾಯಿತು.
ಮೋಹನ್ ಕುಮಾರ್ ಅವರು ಅತ್ಯಂತ ಕ್ರೀಯಾಶೀಲ ಪತ್ರಕರ್ತರಲ್ಲೊಬ್ಬರಾಗಿದ್ದರು.

ತಮ್ಮ ಬರವಣೆಗೆ ಮೂಲಕ ಅನೇಕ ಸಾಮಾಜಿಕ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಬಗೆಹರಿಸುವಲ್ಲಿ ಕಾರಣರಾಗಿದ್ದರು. ಅವರ ಅಕಾಲಿಕ ಸಾವು ತೀವ್ರ ದುಖ ತಂದಿದೆ.. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೋವು ಬರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ

ಕೆಯುಡಬ್ಲ್ಯೂಜೆ ಸಂತಾಪ;

ಹಿರಿಯ ಪತ್ರಕರ್ತ ಬಿ.ಸಿ.ಮೋಹನಕುಮಾರ್ ಅವರ ನಿಧನಕ್ಕೆ ಕರ್ನಾಟ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಸಂತಾಪ ವ್ಯಕ್ತಪಡಿಸಿದೆ. ಮೋಹನಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.

Tags:
error: Content is protected !!