ಮೈಸೂರು: ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಮೈಸೂರಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಆದರೆ, ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಲು ಮುಂದಾದರು. ಈ ವಿಷಯ ತಿಳಿದ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಶಾಸಕ ಅಶ್ಥತ್ ನಾರಾಯಣ್, ಪೊಲೀಸರ ಬಂಧನ ತಪ್ಪಿಸಲು ತರಕಾರಿ ಗೂಡ್ಸ್ ಆಟೋದಲ್ಲಿ ಬಚ್ಚಿಟ್ಟುಕೊಂಡು ಮೈಸೂರಿಗೆ ಆಗಮಿಸಿದರು.
ಈ ನಡುವೆ ಕಾರ್ಯಕರ್ತರ ಗುಂಪಿನೊಂದಿಗೆ ಮೈಸೂರಿಗೆ ಬರುತ್ತಿದ್ದ ಪಕ್ಷದ ರಾಜ್ಯಾಧ್ಯಕ್ಷ ಬಿ.ಐ ವಿಜಯೇಂದ್ರನ್ನನು ಬಿಡದಿ ಬಳಿಯೇ ಪೊಲೀಸರು ಬಂಧಿಸಿದ್ದರು.