ಮಂಡ್ಯ : ನಿಖಿಲ್ ಕುಮಾರಸ್ವಾಮಿ ಬಂಧನಕ್ಕೆ ಸಚಿವರೊಬ್ಬರಿಂದ ಷಡ್ಯಂತ್ರ ಆರೋಪ ವಿಚಾರ , ನಮಗೂ ಅದಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ. ಪ್ಲ್ಯಾನ್ ಮಾಡುವಂತದ್ದು ಏನು ಇಲ್ಲ ಎಂದು ಮಂಡ್ಯದಲ್ಲಿ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿಖಿಲ್ ಬಂಧನಕ್ಕೆ ಯಾರು ಪ್ಲ್ಯಾನ್ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ನನಗೆ ಗೊತ್ತಿಲ್ಲದೆ ಇರೋದ್ರ ಬಗ್ಗೆ ಮಾತನಾಡೋಲ್ಲ. ವಿಜಯೇಂದ್ರನನ್ನ ಪೊಲೀಸರು ವಶಕ್ಕೆ ಪಡೆದಿದ್ದರು ಆಮೇಲೆ ಬಿಟ್ಟರು. ಇದನ್ನೆಲ್ಲಾ ಪ್ಲ್ಯಾನ್ ಮಾಡೋದು ಏನಿದೆ. ಸಾರ್ವಜನಿಕರಿಗೆ ತೊಂದರೆ ಆಗಿದೆ ಅಂದಾಗ ವಶಕ್ಕೆ ತೆಗೆದುಕೊಂಡಿದ್ದಾರೆ ಆಮೇಲೆ ಬಿಡುತ್ತಾರೆ. ಅದು ಯಾವ ವಿಚಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.
ಅಲ್ಲದೆ ದೇವೇಗೌಡರ ಕುಟುಂಬ ಮುಗಿಸಲು ಈ ರೀತಿ ಮಾಡ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಕುಟುಂಬದವರೇ ರೇವಣ್ಣ ವಿಚಾರವನ್ನು ಅತೀ ಹೆಚ್ಚು ಮಾಧ್ಯಮ ಮುಂದೆ ಚರ್ಚೆ ಮಾಡಿದ್ದು. ಆದರೆ ಅವರು ಜೈಲಿಗೆ ಹೋದ ಮೇಲೆ ಯಾಕೆ ಏನು ಮಾತನಾಡುತ್ತಿಲ್ಲ. ಇದರಲ್ಲಿ ಬಹಳ ಆಶ್ಚರ್ಯ ಜೊತೆಗೆ ಅರ್ಥಮಾಡಿಕೊಳ್ಳುವುದು ಇದೆ. ನನಗೂ ಇದು ಸಮಾಧಾನ ತರುವಂತದ್ದು ಅಲ್ಲ. ನನಗೂ ಸತ್ಯ ಗೊತ್ತಿಲ್ಲ, ಸತ್ಯ ಗೊತ್ತಿಲ್ಲದೆ ನಾನು ಏನು ಹೇಳಲಿ. ಇದೆಲ್ಲಾ ಪರಿಸ್ಥಿತಿಗಳು. ನಾವು ತಪ್ಪು ಮಾಡಲಿ ಇನ್ನೋಬ್ಬರು ತಪ್ಪು ಮಾಡಲಿ ಕಾನೂನು ಅದು. ನಾವು ಏನು ಮಾಡೊಕ್ಕೆ ಆಗಲ್ಲ, ಕಾನೂನು ಪ್ರಕಾರ ಹೋಗಬೇಕು ಅಷ್ಟೆ ಎಂದು ಹೇಳಿದರು.