ಮಂಡ್ಯ : ಮುಡಾ ಹಗರಣ ವಿಚಾರವಾಗಿ ನಡೆದಿರುವ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸಿಎಂ ಹೆಸರೇಳಿದ್ರೆ ಸರಿ ಹೋಗುತ್ತದೆ ಎಂದು ಬಿಜೆಪಿಯವರು ಅಂದುಕೊಂಡಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಮುಡಾ ಹಗರಣ ವಿಚಾರವಾಗಿ ವಿಪಕ್ಷಗಳು ಸಿಎಂ ವಿರುದ್ಧ ಆರೋಪ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಬಗ್ಗೆ ಮೊನ್ನೆಯೇ ಹೇಳಿದ್ದೇನೆ. ಸಿದ್ದರಾಮಯ್ಯ ಅವರ ಜಮೀನನ್ನು ನೋಟಿಸ್ ಇಲ್ಲದೆ, ಅವರ ಅನುಮತಿ ಪಡೆದುಕೊಳ್ಳದೆ ಮುಡಾದವರು ಜಮೀನು ಉಪಯೋಗಿಸಿಕೊಂಡಿದ್ದಾರೆ. ದಯಮಾಡಿ ಸ್ಪಷ್ಟವಾಗಿ ನೀವು ಇದನ್ನ ಅರ್ಥ ಮಾಡಿಕೊಳ್ಳಬೇಕು. ಕ್ಲಿಯರ್ ಕಟ್ಟಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಅವರಣ್ಣ ಕೊಟ್ಟಿದ್ದಂತಹ ಜಮೀನನ್ನ ಅನಧಿಕೃತವಾಗಿ ಯಾವುದೇ ಮಾಹಿತಿ ಇಲ್ಲದೆ, ಯಾವುದೇ ನೋಟಿಸ್ ಕೊಡದೆ ಮುಡಾದವರು ಅವರಿಂದ ಪಡೆದುಕೊಂಡಿದ್ದಾರೆ. ಬಳಿಕ ಇವರು ಕಾನೂನಿನ ಪ್ರಕಾರ ನಮಗೆ ಪರ್ಯಾಯ ಜಮೀನು ಕೊಡಿ ಎಂದು ಕೇಳಿದ್ದಾರೆ. ಅದಕ್ಕೆ ಮುಡಾದವರು ಸಹ ಜಮೀನು ಕೊಟ್ಟಿದ್ದಾರೆ.
ರೆಸ್ಯುಲೇಶನ್ ತಪ್ಪಾಗಿದ್ರೆ ಅಥವಾ ಇವರಿಗೆ ಎಕ್ಟ್ರಾ ಜಮೀನು ಕೊಟ್ಟಿದ್ರೆ, ಅಥವಾ ಬೇರೆಯವರಿಗೆ ಜಮೀನು ಕೊಟ್ಟಿದ್ರೆ ಯಾರದ್ದು ತಪ್ಪು, ಮುಡಾದವರ ತಪ್ಪು. ಯಾರ ಆಡಳಿತ ಇತ್ತು..? ಬಿಜೆಪಿ ಆಡಳಿತ. ಯಾರು ಅಧ್ಯಕ್ಷರಾಗಿದ್ರು..? ಬಿಜೆಪಿಯವರು ಆಗಿದ್ರು. ಬಿ.ವೈ ವಿಜಯೇಂದ್ರ, ಆರ್ ಅಶೋಕ್ ಇವರು ಪ್ರತಿಭಟನೆ ಮಾಡಬೇಕಾಗಿದದ್ದು ಕಾಂಗ್ರೆಸ್ ಸರ್ಕಾರದ ವಿರುದ್ಧ ಅಲ್ಲ, ಬೊಮ್ಮಾಯಿ, ಎಚ್.ವಿ ರಾಜೀವ್ ವಿರುದ್ಧ. ಅವತ್ತು ಇದ್ದಂತಹ ಆಡಳಿತ ಮಂಡಳಿ ಇದಕ್ಕೆ ಕಾರಣ. ಈಗಾಗಿ ಅವರ ತಪ್ಪು ಮುಚ್ಚಿಟ್ಟುಕೊಳ್ಳಲು ಸಿದ್ರಾಮಯ್ಯ ಹೆಸರೇಳಿದರೆ ಸರಿಹೋಗುತ್ತದೆ ಅಂದುಕೊಂಡಿದ್ದಾರೆ ಎಂದು ಕಿಡಿಕಾರಿದರು.