ಮಂಡ್ಯ : ಯಾರು ಅವನು ಪುಟ್ಟರಾಜು, ಸರಿಯಾಗಿ ಮಾತನಾಡೋಕ್ಕೆ ಹೇಳಿ ಅವನಿಗೆ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ವಿರುದ್ಧ ಏಕವಚನದಲ್ಲಿ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
CWRC ಮುಂದೆ ಸರಿಯಾದ ವಾದ ಮಂಡಿಸಿಲ್ಲ ಎಂಬ ವಿಚಾರಕ್ಕೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, ಅವನು ಯಾರು ಪುಟ್ಟರಾಜು ಸರಿಯಾಗಿ ಮಾತನಾಡಲು ಹೇಳಿ. ಸುಮ್ನೆ ಏನೇನೋ ಮಾತನಾಡಿದ್ರೆ ಹೇಗೆ. ನಾನು ಅವರತ್ತಿರ ಕಲಿತುಕೊಳ್ಳಬೇಕಾ..? ನನಗೆ ಬೇಡ ಉತ್ತರ ಕೊಡೋದು, ನಮ್ಮ ಎಂಎಲ್ ಎ ರವಿಗೆ ಉತ್ತರ ಕೊಡಲು ಹೇಳಿ ಪುಟ್ಟರಾಜುಗೆ ಸಾಕು ಎಂದು ಕಿಡಿಕಾರಿದರು.
ಅಲ್ಲದೆ ಅಧಿಕಾರಿಗಳು ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡಿದ್ದಾರೆ. ಖಡಕ್ ಆಗಿ ನೀರು ಬೀಡೋದಿಕ್ಕೆ ಆಗಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ತೀಟೆ ಮಾಡಲು ವಿರೋಧ ಪಕ್ಷದವರಿಗೆ ಬೇರೆ ವಿಚಾರವಿದೆ. ಅವಕಾಶಗಳು ಕೂಡ ಇದೆ. ಪುಟ್ಟರಾಜುಗೆ ಇದೇ ಕೆಲಸನಾ, ಬೇರೆ ಕೆಲಸ ಇಲ್ವಾ..? ಕುಮಾರಸ್ವಾಮಿ ಅವರೇ ಹೇಳಿದ್ರು ನನ್ನ ಮೊದಲ ಆದ್ಯತೆ ಕಾವೇರಿ ಎಂದು. ಕುಮಾರಸ್ವಾಮಿ ಅವರೇ ಮಾತುಕೊಟ್ಟಿದ್ದು, ಈಗ ಅವರೇ ಹೇಳಲಿ ಅದಕ್ಕೂ ನನಗೂ ಸಂಬಂಧವಿಲ್ಲ ಎಂದು . ಕಾವೇರಿ ಸಮಸ್ಯೆ ಬಗೆಹರಿಸುವುದು ಕುಮಾರಸ್ವಾಮಿ ಜವಾಬ್ದಾರಿ ಎಂದು ಹೇಳಿದರು.





