Mysore
17
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

43 ಕೋಟಿ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಎನ್. ಚೆಲುವರಾಯಸ್ವಾಮಿ

ಮಂಡ್ಯ: ನಗರದಲ್ಲಿ 43 ಕೋಟಿ ರೂ ವೆಚ್ಚದಲ್ಲಿ ನಗರದ ಫ್ಯಾಕ್ಟರಿ ಸರ್ಕಲ್ ಹಾಗೂ ಸಂಜಯ್ ಸರ್ಕಲ್ ನಲ್ಲಿ ಹೈಟೆಕ್ ಮಾದರಿ ವೃತ್ತ ನಿರ್ಮಾಣ, ಎನ್‌ಎಚ್-275 ಶ್ರೀನಿವಾಸಪುರ ಗೇಟ್ ನಿಂದ ಇಂಡುವಾಳು ಅಂಡರ್ ಪಾಸ್ ವರೆಗೆ ಮಂಡ್ಯ ನಗರದ ಮಧ್ಯ ಭಾಗದಲ್ಲಿ ವಿಶ್ವ ದರ್ಜೆಯ ರಸ್ತೆ ಹಾಗೂ ಪಾದಾಚಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು 33 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಅಮರಾವತಿ ಹೋಟೆಲ್‌ನಿಂದ ಜ್ಯೋತಿ ಇಂಟರ್ನ್ಯಾಷನಲ್ ಹೋಟೆಲ್ ವರೆಗೆ ಹೈಟೆಕ್ ಪುಟ್‌ಬಾತ್ ಮತ್ತು ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಅಣ್ಣೂರಿನ ಮಾಜಿ ವಾಯ್ಸ್ ಚಾನ್ಸಲರ್ ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.

ಅಧಿಕಾರಕ್ಕೆ ಬಂದ 8 ತಿಂಗಳಲ್ಲಿಯೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಯ ಜನಸಾಮಾನ್ಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಶಾಸಕರಾದ ರವಿಕುಮಾರ್, ಉದಯ್ ಹಾಗೂ ರಮೇಶ್ ಬಂಡಿ ಸಿದ್ದೇಗೌಡ ಮೂವರು ನಗರದ ಅಭಿವೃದ್ಧಿಗಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎಂದರು.

ಶಾಸಕ ಪಿ. ರವಿಕುಮಾರ್, ಉದ್ಯಮಿ ವೆಂಕಟರಮಣಗೌಡ( ಸ್ಟಾರ್ ಚಂದ್ರು) ಸೇರಿದಂತೆ ಇತರರು ಹಾಜರಿದ್ದರು.

Tags:
error: Content is protected !!