ಮಂಡ್ಯ: ಜಿಲ್ಲೆಯ ಪಾಂಡಪುರ ತಾಲ್ಲೂಕಿನ ಐತಿಹಾಸಿಕಕ್ಕೆ ಪ್ರಸಿದ್ಧವಾಗಿರುವ ದೇವಾಲಯವಾದ ಮೇಲುಕೋಟೆಯ ಚಲುವ ನಾರಾಯಣಸ್ವಾಮಿ ದೇಗುಲದಲ್ಲಿ ವಿಜೃಂಭಣೆಯಿಂದ ಶ್ರೀನಿವಾಸ ಪದ್ಮಾವತಿ ಕಲ್ಯಾಣ ಮಹೋತ್ಸವ ನಡೆದಿದೆ.
ಮಂಡ್ಯ ಜಿಲ್ಲೆ ಮೇಲುಕೋಟೆಯ(ಯಾದವಗಿರಿ) ಚಲುವ ನಾರಾಯಣಸ್ವಾಮಿ ದೇವಾಲಯ ಇತಿಹಾಸವುಳ್ಳ ಸುಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ಶಿವರಾತ್ರಿಯ ವೇಳೆಗೆ ಶ್ರೀನಿವಾಸ ಕಲ್ಯಾಣ ಹಾಗೂ ಪದ್ಮಾವತಿ ಅವರ ಕಲ್ಯಾಣ ಮಹೋತ್ಸವ ನಡೆಯುತ್ತದೆ. ಅಂತೆಯೇ ಇಂದು(ಫೆಬ್ರವರಿ.23) ಶ್ರೀನಿವಾಸ ಹಾಗೂ ಪದ್ಮಾವತಿ ದೇವರ ಕಲ್ಯಾಣ ಮಹೋತ್ಸವವನ್ನು ಅದ್ದೂರಿಯಾಗಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದೆ.
ಈ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಅಲ್ಲದೇ ಮೇಲುಕೋಟೆಯ ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಪುಟ್ಟರಾಜು ಅವರು ತಮ್ಮ ಪತ್ನಿಯೊಂದಿಗೆ ಆಗಮಿಸಿ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀನಿವಾಸ ಮತ್ತು ಪದ್ಮಾವತಿ ದೇವರ ದರ್ಶನ ಪಡೆದಿದ್ದಾರೆ.





