ಮಂಡ್ಯ: ಮಂಡ್ಯ ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಭಕ್ತರ ಹಿಂಡೆ ಬರುತ್ತಿದ್ದು, ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಪಾಂಡುಪುರ ತಾಲೂಕಿನ ಮೇಲಕೋಟೆ ಚೆಲುವರಾಯಸ್ವಾಮಿ ದೇವಾಲಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಆದೇಶಿಸಲಾಗಿದೆ.
ಐತಿಹಾಸಿಕ ಹಿನ್ನಲೆಯುಳ್ಳ ಈ ದೇವಾಲಯಕ್ಕೆ ವರ್ಷದ ಮೊಲದ ದಿನ ಸ್ವಾಮಿಯ ದರ್ಶನ ಪಡೆಯಲು ತಂಡೋಪ ತಂಡವಾಗಿ ಭಕ್ತರು ಆಗಮಿಸುತ್ತಿದ್ದಾರೆ. ಆದ್ರೆ ಅವರೆಲ್ಲರಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಭಕ್ತರು ಮಾಸ್ಕ್ ಧರಿಸಿ ದೇವರ ದರ್ಶನ ಪಡೆದಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯಾದ್ಯಂತ ಕೋವಿಡ್ ರೂಪಾಂತರಿ ಜೆಎನ್‌೧ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮಾಸ್ಕ್‌ನ್ನು ದೇವಸ್ಥಾನದ ಆವರಣದಲ್ಲಿ ಕಡ್ಡಾಯಗೊಳಿಸಿ ಇಲ್ಲಿನ ಆಡಳಿತ ಮಂಡಳಿ ಅದೇಶ ನೀಡಿದೆ.
ದೇವಸ್ಥಾನಕ್ಕೆ ಆಗಮಿಸುವವರಿಗೆ ಮೊದಲು ಮಾಸ್ಕ್ ಚೆಕ್ ಮಾಡಿ ದೇವಾಲಯಕ್ಕೆ ಬಿಡುತ್ತಿದ್ದಾರೆ. ನಿನ್ನೆ ವರೆಗೂ ಮಾಸ್ಕ್ ಇಲ್ಲದೇ ದೇವರ ದರ್ಶನಕ್ಕೆ ಅವಕಾಶವಿತ್ತು. ಇಂದು ಹೊಸ ವರ್ಷದ ಮೊಲದ ದಿನವಾದ್ದರಿಂದ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಕೋವಿಡ್ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ.