Mysore
23
clear sky

Social Media

ಶನಿವಾರ, 14 ಮಾರ್ಚ್ 2026
Light
Dark

ಮಂಡ್ಯ: ಮದುವೆ ಕ್ಯಾನ್ಸಲ್‌ ಆಗಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

ಮಂಡ್ಯ: ಮದುವೆ ಕ್ಯಾನ್ಸಲ್‌ ಆಗಿದ್ದಕ್ಕೆ ಮನನೊಂದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.‌ಪೇಟೆಯಲ್ಲಿ ನಡೆದಿದೆ.

ಕೆ.ಆರ್.ಪೇಟೆ ತಾಲ್ಲೂಕಿನ ವಳಗೆರೆ ಮೆಣಸ ಗ್ರಾಮದ ಕಾವ್ಯ ಎಂಬುವವಳೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಯಾಗಿದ್ದಾಳೆ.

ಕಾವ್ಯಳಿಗೆ 15 ದಿನಗಳ ಹಿಂದೆ ಹಾಸನದ ಹುಡುಗನ ಜೊತೆ ಮದುವೆ ಫಿಕ್ಸ್‌ ಆಗಿತ್ತು. ಆದರೆ ಹುಡುಗನ ಮನೆಯವರು ಮದುವೆ ಬೇಡ ಎಂದು ಕ್ಯಾನ್ಸಲ್‌ ಮಾಡಿದ್ದರು. ಇದರಿಂದ ಮನನೊಂದ ಕಾವ್ಯ ತಾನು ಕೆಲಸ ನಿರ್ವಹಿಸುತ್ತಿದ್ದ ಕಿಕ್ಕೇರಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲೇ ನಿದ್ರೆ ಮಾತ್ರೆ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದಳು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಸಂಬಂಧ ಕಿಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!