ವಿವಿಧ ಜಯಂತಿಯಗಳನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ : ಬಿ. ಸಿ ಶಿವಾನಂದಮೂರ್ತಿ
ಮಂಡ್ಯ : ಜಿಲ್ಲಾಡಳಿತ ವತಿಯಿಂದ ಏಪ್ರಿಲ್ ಮಾಹೆಯಲ್ಲಿ ಬರುವ ಜಯಂತಿಗಳನ್ನು ಯಾವುದೇ ಲೋಪದೋಷವಿಲ್ಲದೆ ಅರ್ಥಪೂರ್ಣವಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿ ಬಿ. ಸಿ ಶಿವಾನಂದಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಏಪ್ರಿಲ್ ಮಾಹೆಯಲ್ಲಿ ಬರುವ ದೇವರದಾಸಿಮಯ್ಯ ಜಯಂತಿ ಹಾಗೂ ಭಗವಾನ್ ಮಹಾವೀರ ಜಯಂತಿಯನ್ನು ಅರ್ಥಪೂರ್ಣವಾಗಿ ನಡೆಸಲು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು ದೇವರದಾಸಿಮಯ್ಯ ಜಯಂತಿಯನ್ನು ಏಪ್ರಿಲ್ 2 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಚರಿಸಲು ಸಮುದಾಯ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನಿಸಿದರು.
ಭಗವಾನ್ ಮಹಾವೀರ ಜಯಂತಿಯನ್ನು ಏಪ್ರಿಲ್ 10 ರಂದು ಕಲಾಮಂದಿರದಲ್ಲಿ ಆಚರಿಸಲು ಸಮುದಾಯ ಮುಖಂಡರೊಂದಿಗೆ ಚರ್ಚಿಸಿ ನಿರ್ಧರಿಸಲಾಯಿತು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಂದೀಶ್, ಆಯುಷ್ ವೈದ್ಯಾಧಿಕಾರಿ ಪುಷ್ಪ, ಜಿಲ್ಲಾ ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ. ಸೋಮಶೇಖರ್ ಹಾಗೂ ವಿವಿಧ ಸಮುದಾಯ ಮುಖಂಡರು ಉಪಸ್ಥಿತರಿದ್ದರು.





