Mysore
30
clear sky

Social Media

ಮಂಗಳವಾರ, 11 ಮಾರ್ಚ್ 2025
Light
Dark

ಮಂಡ್ಯ: ನ.1ರಿಂದ ರಾಜ್ಯ ಮಟ್ಟದ ಕ್ರಿಕೆಟ್‌ ಪಂದ್ಯಾವಳಿ

ಮಂಡ್ಯ: ಕರ್ನಾಟಕ ರಾಜ್ಯ ಸಾಫ್ಟ್‌ ಬಾಲ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ರಾಜ್ಯ ಮಟ್ಟದ ಕರ್ನಾಟಕ ಸಾಫ್ಟ್‌ ಬಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ನವೆಂಬರ್ ೧ರಿಂದ ಡಿಸೆಂಬರ್ ೧ರವರೆಗೆ ನಡೆಸಲಾಗುವುದು ಎಂದು ಅಸೋಸಿಯೇಷನ್‌ನ ಸಂಸ್ಥಾಪಕ ಅಧ್ಯಕ್ಷ ಗಂಗಾಧರ್ ರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ೩೧ ಜಿಲ್ಲೆಗಳ ಪೈಕಿ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ೩೨ ತಂಡಗಳನ್ನು ರಚಿಸಲಾಗಿದ್ದು, ಒಟ್ಟು ೬೯೯ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸದರಿ ಪಂದ್ಯಾವಳಿಯು ಮುಂದಿನ ಪೀಳಿಗೆಯ ಕ್ರಿಕೆಟ್ ಪ್ರತಿಭೆಗೆ ವೇದಿಯಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಪಂದ್ಯಾವಳಿಯು ಬೆಂಗಳೂರಿನ ಆಚಾರ್ಯ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಪಂದ್ಯಾವಳಿಯ ಪಂದ್ಯಗಳನ್ನು ೯ ಓವರ್‌ಗಳಿಗೆ ಸೀಮಿತಗೊಳಿಸಿದ್ದು, ಸಂಜೆ. ೭.೩೦ರಿಂದ ೯.೩೦ರವರೆಗೆ ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳನ್ನು ಪ್ರಸಾರ ಭಾರತಿಯ ಡಿ.ಡಿ.ಚಂದನದಲ್ಲಿ ನೇರ ಪ್ರಸಾರ ಮಾಡಲಾಗುವುದು. ಈ ಪಂದ್ಯಾವಳಿಯನ್ನು ಮುಂದಿನ ಹಂತಕ್ಕೆ ತಲುಪಿಸುವ ದೃಷ್ಠಿಯಿಂದ ರಾಷ್ಟç ಮಟ್ಟದ ಪಂದ್ಯಾವಳಿಗಳಿಗೆ ಯೋಜನೆ ರೂಪಿಸಲಾಗುತ್ತದೆ. ಇದಕ್ಕಾಗಿ ರಾಜ್ಯದಿಂದ ೨೫ ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಬಾಗೇಗೌಡ, ಮೋಹನ್‌ಕುಮಾರ್, ಚನ್ನಬಸವಯ್ಯ, ರಾಜಶೇಖರ್, ಗಿರೀಶ್, ಮನು ಇದ್ದರು.

Tags: