Mysore
19
overcast clouds

Social Media

ಗುರುವಾರ, 01 ಜನವರಿ 2026
Light
Dark

 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಸಕ್ಕರೆ ನಾಡು ಮಂಡ್ಯ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್‌.20ರಿಂದ 22ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇದಕ್ಕಾಗಿ ಮಂಡ್ಯ ಜಿಲ್ಲಾಡಳಿತ ಸರ್ವ ರೀತಿಯಲ್ಲೂ ಸಜ್ಜಾಗಿದೆ.

ಇನ್ನು ಸಮ್ಮೇಳನಕ್ಕೆ ಬರುವವರನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಸಂಚಾರಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ಡಿಸೆಂಬರ್.‌20ರ ಬೆಳಿಗ್ಗೆ 5 ಗಂಟೆಯಿಂದ ಡಿಸೆಂಬರ್.‌23ರ ಬೆಳಿಗ್ಗೆ 6ಗಂಟೆಯವರೆಗೆ ಸಂಚಾರಿ ಮಾರ್ಗ ಬದಲಾವಣೆ ಆಗಲಿದೆ.

ಬೆಂಗಳೂರು, ರಾಮನಗರ, ತುಮಕೂರು, ಮದ್ದೂರು, ಮಳವಳ್ಳಿಯಿಂದ ಬರುವವರಿಗೆ ಹೊಸಬೂದನೂರು ಬಳಿ ಎಕ್ಸಿಟ್‌ ಆಗಿ ಸರ್ವಿಸ್‌ ರಸ್ತೆ, ಸಮ್ಮೇಳನದ ಮುಖ್ಯ ದ್ವಾರದ ಮೂಲಕ ಸಮ್ಮೇಳನ ತಲುಪಬಹುದಾಗಿದೆ.

ಇನ್ನು ಶ್ರೀರಂಗಪಟ್ಟಣ, ಮೈಸೂರು, ಪಾಂಡವಪುರದಿಂದ ಬರುವವರಿಗೆ ಶಶಿಕಿರಣ್‌ ಕನ್ವೆನ್‌ಷನ್‌ ಹಾಲ್‌ ಎದುರಿನಲ್ಲಿ ಎಕ್ಸಿಟ್‌ ಆಗಬೇಕು ಎಂದು ಮಾಹಿತಿ ನೀಡಲಾಗಿದೆ.

ಮದ್ದೂರು ಹಾಗೂ ಶ್ರೀರಂಗಪಟ್ಟಣ ಕಡೆಯಿಂದ ಸರ್ವಿಸ್‌ ರಸ್ತೆಯಲ್ಲಿ ಬರುವ ವಾಹನಗಳು ಎಕ್ಸ್‌ಪ್ರೆಸ್‌ ವೇನಲ್ಲಿ ಚಲಿಸುವುದು. ನಿರ್ಬಂಧಿತ ವಾಹನಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳಿಗೆ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.

Tags:
error: Content is protected !!