Mysore
22
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮಂಡ್ಯ | ವಾರಕ್ಕೊಂದು ವಾರ್ಡ್ ಇ-ಖಾತಾ ಅಭಿಯಾನ

ಮಂಡ್ಯ : ರಾಜ್ಯ ಸರ್ಕಾರವು ಆಸ್ತಿ ತೆರಿಗೆಯಲ್ಲಿ ತಿದ್ದುಪಡಿ ತಂದಿದ್ದು ಇದರಲ್ಲಿ “ಎ” ಖಾತಾ ಮತ್ತು “ಬಿ” ಖಾತಾ ಎಂದು ಆಸ್ತಿಗಳನ್ನು ವಿಂಗಡಿಸಲಾಗಿದೆ‌. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಸದುದ್ದೇಶದಿಂದ ವಾರಕ್ಕೊಂದು ವಾರ್ಡ್ ಇ-ಖಾತಾ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.

ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆಸ್ತಿ ಕಾಯ್ದೆ ಕುರಿತಾಗಿ ತಿಳಿಸಲಾಗಿದೆ. ಸಾರ್ವಜನಿಕರಿಂದ ಅರ್ಜಿಗಳನ್ನು ಪಡೆದು ಜರೂರಾಗಿ ಪ್ರಗತಿ ಸಾಧಿಸುವಂತೆ ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಮಂಡ್ಯ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳಿಗೂ ಎ-ಖಾತಾ ಮತ್ತು ಬಿ-ಖಾತಾ ನೀಡುವುದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು. ಸದರಿ ಯೋಜನೆಯನ್ನು 03 ತಿಂಗಳೊಳಗಾಗಿ ಶೇ.100ರಷ್ಟು ಪ್ರಗತಿ ಸಾಧಿಸಬೇಕಾಗಿದ್ದು. ಇದುವರೆವಿಗೂ ಪ್ರಗತಿ ಸಾಧಿಸದೇ ಇರುವುದು ಕಂಡುಬಂದಿರುತ್ತದೆ

ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶೀಘ್ರಗತಿಯಲ್ಲಿ ಪ್ರಗತಿಯನ್ನು ಸಾಧಿಸಲು ಇ-ಖಾತಾ ಅಭಿಯಾನವನ್ನು ವಾರ್ಡವಾರು ಹಮ್ಮಿಕೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಮಂಡ್ಯ ನಗರಸಭೆಯಲ್ಲಿ ಇ-ಖಾತಾ ನೀಡಲು ಇ-ಖಾತಾ ಆಂದೋಲನವನ್ನು ವಾರ್ಡ್‌ವಾರು ಕೈಗೊಂಡು ಶೇ.100 ರಷ್ಟು ಪ್ರಗತಿ ಸಾಧಿಸಲು ಸೂಚಿಸಲಾಗಿದೆ

ವಾರಕ್ಕೆ ಒಂದು ವಾರ್ಡ್-ಇ-ಖಾತಾ ಅಭಿಯಾನಕ್ಕೆ ದಿನಾಂಕವನ್ನು ನಿಗಧಿಪಡಿಸಿಕೊಂಡು ವಾರ್ಡ್‌ವಾರು ಇ-ಖಾತಾ ಆಂದೋಲನದ ತಂಡಗಳನ್ನು ರಚಿಸಿ, ಪ್ರತಿ ತಂಡಕ್ಕೆ ಎಲ್ಲಾ ಶಾಖಾಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡಂತೆ ತಂಡ ರಚಿಸಲಾಗುವುದು ಎಂದು ತಿಳಿಸಿದರು.

ರಚಿಸಿದ ತಂಡಗಳು ಆಯಾಯ ವಾರ್ಡ್‌ ಗಳ ಸದಸ್ಯರುಗಳ ಸಹಕಾರ ಪಡೆದು ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಗತಿ ಸಾಧಿಸಬೇಕು. ವಾರ್ಡ್‌ವಾರು ಪ್ರತಿಯೊಂದು ತಂಡಕ್ಕೂ ತಲಾ ಒಬ್ಬರಂತೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ, ಆಯಾಯ ವಾರ್ಡ್ ಗಳಿಗೆ ಸಂಬಂಧಿಸಿದ ಕರ ವಸೂಲಿಗಾರರು, ಕಂದಾಯ ನಿರೀಕ್ಷಕರು ಮತ್ತು ಡಾಬಾ ಎಂಟ್ರಿ ಅಪರೇಟರ್‌ಗಳಿಗೆ ಅವಶ್ಯಕ ಇತರೆ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳತಕ್ಕದ್ದು ಎಂದು ಹೇಳಿದರು.

ಇ-ಖಾತಾ ನೀಡಲು ಬಾಕಿ ಇರುವ ಆಸ್ತಿಗಳನ್ನು ಗುರುತಿಸಿ ಇ-ಖಾತಾ ಪಡೆಯಲು ಗುರುತಿಸಲಾದ ಆಸ್ತಿಗಳ ಮಾಲೀಕರು ಇ-ಖಾತಾ ಪಡೆಯಲು ಅಗತ್ಯ ದಾಖಲೆಗಳನ್ನು ಸಲ್ಲಿಸಲು ಮಾಹಿತಿ ನೀಡಬೇಕು, ಇ-ಖಾತಾ ಅಭಿಯಾನದ ಕುರಿತು ಪ್ರಚಾರ ಮಾಡಲು ಮಂಡ್ಯ ನಗರಸಭೆಯ ಕಸ ಸಂಗ್ರಹಣೆ ವಾಹನಗಳ ಮೂಲಕ ಮುದ್ರಿತ ಧ್ವನಿ (ಆಡಿಯೋ) ಪ್ರಚಾರಪಡಿಸಿ ಮತ್ತುಕರಪತ್ರಗಳನ್ನು ಮುದ್ರಿಸಿ ಮನೆ ಮನೆಗೆ ತಲುಪಿಸಿ ವ್ಯಾಪಕ ಪ್ರಚಾರ ಕೈಗೊಳ್ಳಿ ಎಂದರು. ಮಂಡ್ಯ ನಗರಸಭೆಯ ಎಲ್.ಇ.ಡಿ. ಸ್ಕ್ರೀನ್ ಗಳ ಮುಲಕ ಇ-ಖಾತಾ ಅಂದೋಲನದ ಬಗ್ಗೆ ಪ್ರಚುರ ಪಡಿಸಿ. ಇ-ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳ ಪಟ್ಟಿಯನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲ ಪ್ರಚುರಪಡಿಸಲಾಗುತ್ತದೆ ಎಂದು ಹೇಳಿದರು.

‘ಎ’ ರಿಜಿಸ್ಟರ್‌ನಲ್ಲಿ ದಾಖಲಿರುವ ಅಸ್ತಿಗಳಿಗೆ ಇ-ಖಾತಾ ನೀಡಲು ಪಡೆಯಬೇಕಾದ ದಾಖಲೆಗಳುಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕುಪತ್ರಗಳು/ಮಂಜೂರಾತಿ ಪತ್ರಗಳು/ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕುಪತ್ರ. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ. ಪ್ರಸಕ್ತ ಸಾಲಿನವರೆಗೆ ಋಣಭಾರ ರಾಹಿತ್ಯ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಭಾವಚಿತ್ರ ಮತ್ತು ಸ್ವತ್ತಿನ ಛಾಯಾಚಿತ್ರ. ಮಾಲೀಕರ ಗುರುತಿನ ದಾಖಲೆ (ಆಧಾರ ಕಾರ್ಡ್. ಮತದಾರರ ಗುರುತಿನ ಚೀಟಿ/ಪಾನ್ ಕಾರ್ಡ್/ಪಡಿತರ ಚೀಟಿ) ನೀಡಬೇಕು ಎಂದರು.

ಬಿ-ರಿಜಿಸ್ಟರ್‌ನಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ ಇ-ಖಾತಾ ನೀಡಲು ಪಡೆಯಬೇಕಾದ ದಾಖಲೆಗಳು
ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವದ ಸಾಬೀತುಪಡಿಸುವ ದಿನಾಂಕ: 10-09-2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳ/ದಾನಪತ್ರ/ವಿಭಾಗ ಪತ್ರ/ಹಕ್ಕು ಖುಲಾಸೆ ಪತ್ರಗಳು. ಭೂ-ಪರಿವರ್ತನಾ ಆದೇಶ/ಪಹಣಿ/ರೆವಿನ್ಯೂ ಸ್ಕೆಚ್/ಇತರೆ ಅವಶ್ಯ ದಾಖಲೆಗಳು. ಪ್ರಸಕ್ತ ಸಾಲಿನವರೆಗೆ ಋಣಭಾರ ರಾಹಿತ್ಯ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಭಾವಚಿತ್ರ ಮತ್ತು ಸ್ವತ್ತಿನ ಛಾಯಾಚಿತ್ರ. ಮಾಲೀಕರ ಗುರುತಿನ ದಾಖಲೆ (ಆಧಾರ ಕಾರ್ಡ್. ಮತದಾರರ ಗುರುತಿನ ಚೀಟಿ/ಪಾನ್ ಕಾರ್ಡ್/ಪಡಿತರ ಚೀಟಿಯನ್ನು ನೀಡಬೇಕು ಎಂದರು.

ವಾರ್ಡ್‌ ವಾರು ಇ-ಖಾತಾ ಪಡೆಯದಿರುವ ಆಸ್ತಿಗಳ ಪಟ್ಟಿ ಮಾಡಿಕೊಳ್ಳುವುದು ಮತ್ತು ವಾರ್ಡ್ ಅಥವಾ ಬೀದಿಗಳನ್ನು, ಅಪಾರ್ಟ್‌ ಮೆಂಟ್/ಬಡಾವಣೆಗಳನ್ನು ಗುರುತಿಸಿ ಆ ಭಾಗದಲ್ಲಿನ ಸಕ್ರಿಯ ನಾಗರೀಕರ ಗುಂಪುಗಳು ಅಥವಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (ಆರ್.ಡಬ್ಲ್ಯು.ಎ.) ಸಕ್ರಿಯ ವ್ಯಕ್ತಿಗಳ ಸಹಾಯವನ್ನು ಪಡೆಯುವುದು. ಆಯಾಯ ವಾರ್ಡ್‌ಗಳ ಎನ್.ಜಿ.ಓ. ಮತ್ತು ಎಸ್.ಹೆಚ್.ಜಿ. ಗುಂಪುಗಳ ಸದಸ್ಯರುಗಳನ್ನು ಸಕ್ರೀಯವಾಗಿ ತೊಡಿಸಿಕೊಂಡು ಇ-ಖಾತಾ ಅಂದೋಲನ ಕೈಗೊಳ್ಳುವುದು ಎಂದರು.

ಆಂದೋಲನದ ದಿನಾಂಕದಂದು ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯ ಕಂಪ್ಯೂಟರ್‌ಗಳು, ಪ್ರಿಂಟರ್‌ಗಳು ಮತ್ತು ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲಾಗುವುದು. ಮೂಲಭೂತ ಸೌಕರ್ಯಗಳೊಂದಿಗೆ ಸಾಕಷ್ಟು ಕುಳಿತುಕೊಳ್ಳುವ ಮತ್ತು ಕಾಯುವ ಸ್ಥಳವನ್ನು ಆಯೋಜಿಸುವುದು ಮತ್ತು ಆಗಮಿಸುವ ನಾಗರೀಕರಿಗೆ ಟೋಕನ್‌ಗಳನ್ನು ನೀಡುವುದು ಎಂದು ತಿಳಿಸಿದರು.

ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲು ಇ-ಖಾತಾ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸುವುದು. ಇ-ಖಾತಾ ಆಂದೋಲನಕ್ಕೆ ನಿಯೋಜಿಸಿದ ಅಧಿಕಾರಿ/ಸಿಬ್ಬಂದಿಗಳು ಬೆಳಿಗ್ಗೆ 7.00 ಗಂಟೆಗೆ ವಾರ್ಡ್‌ನಲ್ಲಿದ್ದು ಅಸ್ತಿದಾರರಿಂದ ದಾಖಲಾತಿಗಳನ್ನು ಸಂಗ್ರಹಿಸಿ. ಕ್ರಮವಹಿಸುವುದು. ಇ-ಖಾತಾ ನೀಡಲು ಕ್ರಮವಹಿಸಬೇಕು ಎಂದು ಹೇಳಿದರು.

ಆಸ್ತಿದಾರರಿಂದ ಸ್ವೀಕರಿಸಿದ ಅರ್ಜಿಗಳಿಗೆ ಒಂದು ವಾರದಲ್ಲಿ ಇ-ಖಾತಾ ನೀಡಲು ಕ್ರಮ ವಹಿಸಲಾಗಿದೆ. ಸಾರ್ವಜನಿಕರಿಗೆ ಇ-ಖಾತಾ ಬಗ್ಗೆ ಮಾರ್ಗದರ್ಶನ ನೀಡಲು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸುವುದು. ಇ-ಖಾತಾ ಆಂದೋಲನದ ಪ್ರಗತಿಯ ಮಾಹಿತಿಯನ್ನು ಪ್ರತಿ ದಿನ ಅಧಿಕಾರಿಗಳು ಸಲ್ಲಿಸಬೇಕು ಎಂದು ತಿಳಿಸಿದರು.

ಮಂಡ್ಯ ನಗರಸಭೆಯ ಸದರಿ ಪ್ರಕ್ರಿಯೆ ಕುರಿತು ಯೋಜನಾ ನಿರ್ದೇಶಕರು ವಾರಕ್ಕೊಮ್ಮೆ ಭೇಟಿ ನೀಡುವುದು. ಸದರಿ ಕಾರ್ಯವು ತ್ವರಿತವಾಗಿ ಮತ್ತು ವ್ಯವಸ್ಥಿತವಾಗಿ ಕೈಗೊಳ್ಳುತ್ತಿರುವ ಬಗ್ಗೆ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಬೇಕು. ಸದರಿ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವ ಹಾಗೂ ವಿಳಂಬಕ್ಕೆ ಕಾರಣರಾಗುವ ಅಧಿಕಾರಿ/ನೌಕರರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಎಂದು ತಿಳಿಸಿರುತ್ತಾರೆ.

Tags:
error: Content is protected !!