Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮಂಡ್ಯ: ವಯನಾಡು ಭೂಕುಸಿತದಲ್ಲಿ ಮೃತಪಟ್ಟವರ ಮನೆಗೆ ಸಚಿವ ಎನ್‌.ಚಲುವರಾಯಸ್ವಾಮಿ ಭೇಟಿ, ಸಾಂತ್ವಾನ

ಮಂಡ್ಯ: ವಯನಾಡಿನ ಭೂಕುಸಿತದಲ್ಲಿ ಮೃತ ಪಟ್ಟಿದ್ದ ಕೆ.ಆರ್‌ ಪೇಟೆ ಕತ್ತರಘಟ್ಟ ಮೂಲದ ಅಜ್ಜಿ-ಮೊಮ್ಮಗ ನಿಹಾಲ್ ಹಾಗೂ ಲೀಲಾವತಿ ಅವರ ಮನೆಗೆ  ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ‌ಸಚಿವ ಎನ್ ಚಲುವರಾಯಸ್ವಾಮಿ ಅವರು ಶುಕ್ರವಾರ(ಆ.2) ಭೇಟಿ ನೀಡಿ ಸಾಂತ್ವನ ಹೇಳಿದರು.

ಇದೇ ಕುಟುಂಬದ ಮೂರು ಜನರು ವಯನಾಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಹಾಗೂ ಅಗತ್ಯ ಸಹಕಾರ ನೀಡಿ ಸಮನ್ವಯ ವಹಿಸಲು ಕರ್ನಾಟಕ ಸರ್ಕಾರದಿಂದ ಅಧಿಕಾರಿಗಳ ತಂಡ ವಯನಾಡಿಗೆ ತೆರಳಿದ್ದು, ಅವರಿಗೆ ಅಗತ್ಯವಿರುವ ಪ್ರಾಥಮಿಕ ಚಿಕಿತ್ಸೆಯನ್ನು ವಯನಾಡಿನಲ್ಲಿ ಒದಗಿಸಿ ಮುಂದಿನ‌‌ ದಿನಗಳಲ್ಲಿ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ‌ಇದ್ದಲ್ಲಿ ಕರ್ನಾಟಕ ಸರ್ಕಾರದಿಂದ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.

ರೂ 5 ಲಕ್ಷ ಪರಿಹಾರ
ಮೃತರಾದ ಲೀಲಾವತಿ‌ ಅವರಿಗೆ ಸರ್ಕಾರದಿಂದ 5 ಲಕ್ಷ ಪರಿಹಾರ ವಿತರಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು. ನಿಹಾಲ್ ಅವರು ಚಿಕ್ಕ‌ ವಯಸ್ಸಿನ ಹುಡುಗನಾಗಿದ್ದು, ಆವರಿಗೂ ಸಹ ಸಣ್ಣ ಪ್ರಮಾಣದ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಸಚಿವರು ಇದೇ ಸಂದರ್ಭದಲ್ಲಿ ಅಂತ್ಯಕ್ರಿಯೆ ಹಾಗೂ ಮುಂತಾದ ಕಾರ್ಯಗಳಿಗೆ ಸಹಾಯವಾಗಲಿ ಎಂದು ವೈಯಕ್ತಿಕವಾಗಿ ಧನಸಹಾಯ ಮಾಡಿದರು.

ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಉಪಸ್ಥಿತರಿದ್ದರು.

Tags: