Mysore
19
few clouds

Social Media

ಸೋಮವಾರ, 04 ನವೆಂಬರ್ 2024
Light
Dark

ಮಂಡ್ಯ: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನ

ಮಂಡ್ಯ: 2024ರ ಮುಂಗಾರು ಹಂಗಾಮಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದ್ದು, ತಾಲ್ಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯತಿ ಮಟ್ಟಕ್ಕೆ ಮತ್ತು ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಲಾಗಿದೆ.

ಗ್ರಾಮ ಪಂಚಾಯಿತಿ ಮಟ್ಟಕ್ಕೆ ಭತ್ತ ನೀರಾವರಿ ಬೆಳೆಗೆ ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ, ರಾಗಿ (ಮಳೆ ಆಶ್ರಿತ) ಬೆಳೆಗೆ ನಾಗಮಂಗಲ ಮತ್ತು ಪಾಂಡವಪುರ ತಾಲ್ಲೂಕುಗಳ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ, ಮುಸುಕಿನಜೋಳ (ಮಳೆ ಆಶ್ರಿತ) ಬೆಳೆಗೆ ಮಳವಳ್ಳಿ ತಾಲ್ಲೂಕಿನ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ರೈತರು ವಿಮೆಗೆ ನೊಂದಾಯಿಸಬಹುದಾಗಿರುತ್ತದೆ.

ಹೋಬಳಿಮಟ್ಟ : ಭತ್ತ (ನೀರಾವರಿ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ), ಮುಸುಕಿನಜೋಳ (ನೀರಾವರಿ), ತೊಗರಿ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ನೆಲಗಡಲೆ (ಮಳೆ ಆಶ್ರಿತ), ಅಲಸಂದೆ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಟೊಮ್ಯಾಟೋ ಮತ್ತು ಎಲೆಕೋಸು ಬೆಳೆಗಳಿಗೆ ಅಧಿಸೂಚಿತ ಹೋಬಳಿಗಳಲ್ಲಿ ರೈತರು ವಿಮೆಗೆ ನೊಂದಾಯಿಸಬಹುದಾಗಿರುತ್ತದೆ.

ಪರಿಷ್ಕೃತ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಯನ್ವಯ ಬ್ಯಾಂಕಿನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಡಿ ಒಳಪಡಿಸಲಾಗುವುದು, ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೊಸದಿದ್ದಲ್ಲಿ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.

ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆ ಐಚ್ಛಿಕವಾಗಿದ್ದು, ಅಧಿಸೂಚಿಸಲಾದ ಬೆಳೆಗಳಿಗೆ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ / ಕಂದಾಯ ರಶೀದಿ/ ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್ ಸಂಖ್ಯೆ ವಿವರಗಳೊಂದಿಗೆ ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದ್ರ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳೆ ವಿಮೆಗೆ ನೋಂದಾಯಿಸಬಹುದಾಗಿದೆ.

ಪರಿಷ್ಕೃತ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಯನ್ವಯ ಬೆಳೆ ವಿಮೆ ನೊಂದಾಯಿಸಲು FID (Farmer Registration and Unified beneficiary information System) ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ, ಒಂದು ವೇಳೆ ಈIಆ ಸಂಖ್ಯೆಯನ್ನು ಹೊಂದಿರದಿದ್ದಲ್ಲಿ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಅಥವಾ ತೋಟಗಾರಿಕೆ ಇಲಾಖೆಯಲ್ಲಿ ಆಧಾರ್ ಸಂಖ್ಯೆ ಹಾಗೂ ಆರ್.ಟಿ.ಸಿ. ವಿವರಗಳನ್ನು ಸಲ್ಲಿಸಿ ಈIಆ ಸಂಖ್ಯೆಯನ್ನು ಪಡೆಯಬಹುದಾಗಿರುತ್ತದೆ.

ಭತ್ತ (ನೀರಾವರಿ) ಪ್ರತಿ ಎಕರೆಗೆ ರೂ 755/- ಪ್ರತಿ ಹೆಕ್ಟೇರ್ ಗೆ ರೂ 1865/-, ಮುಸುಕಿನಜೋಳ (ನೀರಾವರಿ) ಪ್ರತಿ ಎಕರೆಗೆ ರೂ 522/- ಪ್ರತಿ ಹೆಕ್ಟೇರ್ ಗೆ ರೂ 1290/-, ಮುಸುಕಿನಜೋಳ (ಮಳೆ ಆಶ್ರಿತ) ಪ್ರತಿ ಎಕರೆಗೆ ರೂ 457/-, ಪ್ರತಿ ಹೆಕ್ಟೇರ್ ಗೆ ರೂ 1130/-, ರಾಗಿ (ನೀರಾವರಿ) ಪ್ರತಿ ಎಕರೆಗೆ ರೂ 411 ಪ್ರತಿ ಹೆಕ್ಟೇರ್ ಗೆ ರೂ 1015/-, ರಾಗಿ (ಮಳೆ ಆಶ್ರಿತ) ಪ್ರತಿ ಎಕರೆಗೆ ರೂ 344,ಪ್ರತಿ ಹೆಕ್ಟೇರ್ ಗೆ ರೂ 850/-, ಹುರುಳಿ (ಮಳೆ ಆಶ್ರಿತ) ಪ್ರತಿ ಎಕರೆಗೆ ರೂ 166/-,ಪ್ರತಿ ಹೆಕ್ಟೇರ್ ಗೆ ರೂ 410 ಪಾವತಿಸಬೇಕಿದ್ದು, ವಿಮೆ ಪಾವತಿಸಲು ಆಗಸ್ಟ್ 16 ಕೊನೆಯ ದಿನಾಂಕವಾಗಿರುತ್ತದೆ.

ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಪ್ರತಿ ಎಕರೆಗೆ ರೂ 441/-, ಪ್ರತಿ ಹೆಕ್ಟೇರ್ ಗೆ ರೂ 1090, ಅಲಸಂದೆ (ಮಳೆ ಆಶ್ರಿತ) ಪ್ರತಿ ಎಕರೆಗೆ ರೂ 243/-, ಪ್ರತಿ ಹೆಕ್ಟೇರ್ ಗೆ ರೂ 600/-, ಟೊಮ್ಯಾಟೋ ಪ್ರತಿ ಎಕರೆಗೆ ರೂ 1861.10/-,ಪ್ರತಿ ಹೆಕ್ಟೇರ್ ಗೆ ರೂ 4598.75/- ಎಲೆಕೋಸು ಪ್ರತಿ ಎಕರೆಗೆ ರೂ 1222.19/- ಪ್ರತಿ ಹೆಕ್ಟೇರ್ ಗೆ ರೂ 3020ಪಾವತಿಸಬೇಕಿದ್ದು, ವಿಮೆ ಪಾವತಿಸಲು ಜುಲೈ 15 ಕೊನೆಯ ದಿನಾಂಕವಾಗಿರುತ್ತದೆ.

ತೊಗರಿ (ಮಳೆ ಆಶ್ರಿತ) ಪ್ರತಿ ಎಕರೆಗೆ ರೂ 388/- ಪ್ರತಿ ಹೆಕ್ಟೇರ್ ಗೆ ರೂ 960/- ಪಾವತಿಸಬೇಕಿದ್ದು, ವಿಮೆ ಪಾವತಿಸಲು ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ.

ಎಳ್ಳು (ಮಳೆ ಆಶ್ರಿತ) ) ಪ್ರತಿ ಎಕರೆಗೆ ರೂ 233 ಪ್ರತಿ ಹೆಕ್ಟೇರ್ ಗೆ ರೂ 575/- ನಿಗದಿಯಾಗಿದ್ದು, ವಿಮೆ ಪಾವತಿಸಲು ಜುಲೈ 1 ಕೊನೆಯ ದಿನಂಕವಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags: