ಮಂಡ್ಯ: ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಸಾಗರ ನಲ್ಲೂರು ಫೈಲ್ ಬಡಾವಣೆಯಲ್ಲಿ ನಡೆದಿದೆ.
ಕೆ.ಆರ್.ಸಾಗರದ ನಲ್ಲೂರ್ ಗ್ರಾಮದ ಸುಬ್ಬಯ್ಯ ಎಂಬುವರ ಹಿರಿಯ ಮಗಳು ಗರ್ಭಿಣಿಯಾಗಿರುವ ಭಾವನ(22), ಈಕೆ ಮಗ ಹೇಮಂತ್, ಭಾವನ ಪತಿ ಸುರೇಶ್ (29) ಮತ್ತು ಸುಬ್ಬಯ್ಯ ರವರ ಕಿರಿಯ ಮಗಳು ಐಶ್ಚರ್ಯ(14) ಏಪ್ರಿಲ್ 15 ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.
ಸುರೇಶ್ ಮೈಸೂರು ಜ್ಯೋತಿ ನಗರದ ನಿವಾಸಿಯಾಗಿದ್ದು, ಈತ ಮೈಸೂರು ನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. 15 ರಂದು ಮನೆಯಲ್ಲಿ ನಾಲ್ವರು ಮಾತ್ರ ಇದ್ದು, ಬಳಿಕ ಕೆಲಸ ನಿಮಿತ್ತ ಹೋರ ಹೋಗಿದ್ದು, ಇಲ್ಲಿಯ ತನಕ ಇವರಿಗಾಗಿ ಹುಡುಕಾಟ ಮಾಡಿದರೂ ಪತ್ತೆಯಾಗದ ಕಾರಣ ತಡವಾಗಿ ದೂರು ನೀಡಿರುವುದಾಗಿ ಸುಬ್ಬಯ್ಯ ದೂರಿನಲ್ಲಿ ತಿಳಿಸಿದ್ದಾರೆ.
ಚಹರೆ :
1. ಸುರೇಶ್ 5.7 ಅಡಿ ಎತ್ತರ ಎಣ್ಣೆಗೆಂಪು ಬಣ್ಣ, ಕೋಲು ಮುಖ ಗಡ್ಡ ಬಿಟ್ಟಿದ್ದು, ಕಪ್ಪು ಬಣ್ಣದ ತುಂಬುತೋಳಿನ ಶರ್ಟ್, ನಿಲಿ ಬಣ್ಣ ಪ್ಯಾಂಟ ಧರಿಸಿದ್ದಾನೆ.
2. ಭಾವನ 5.7 ಅಡಿ ಎತ್ತರ ಸಾಧರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಕೆಂಪು ಬಣ್ಣದ ಟಾಪು, ಕಪ್ಪು ಬಣ್ಣದ ಆಂಕಲ್ ಪ್ಯಾಂಟ್ ಧರಿಸಿದ್ದಾರೆ.
3. ಹೇಮಂತ 2 ವರ್ಷ. ದುಂಡು ಮುಖ, ಗೋಧಿ ಮೈಬಣ್ಣ, ನೀಲಿ ಬಣ್ಣದ ಶರ್ಟ್ ನೀಲಿ ಬಣ್ಣದ ನಿಕ್ಕರ್ ಧರಿಸಿರುತ್ತಾನೆ.
4. ಐಶ್ಚರ್ಯ ದುಂಡು ಮುಖ 5.3 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧರಣ ಮೈಕಟ್ಟು, ಗುಲಾಬಿ ಬಣ್ಣದ ಟಾಪು ಹಾಗೂ ಗುಲಾಬಿ ಬಣ್ಣದ ಲೆಗಿನ್ಸ್ ಪ್ಯಾಂಟ್ ಧರಿಸಿದ್ದಾಳೆ.
ಇವರ ಬಗ್ಗೆ ಮಾಹಿತಿ ಸಿಕ್ಕರೆ ತಕ್ಷಣ ಕೆ.ಆರ್.ಸಾಗರ ಪೊಲೀಸ್ ಠಾಣೆ ಸಂಪರ್ಕಿಸಲು ಕೋರಲಾಗಿದೆ ಅಥವಾ ಪಿಎಸ್‌ಐ ಮೊ.ಸಂಖ್ಯೆ 9480804856 ಸಂಪರ್ಕಿಸಬಹುದಾಗಿದೆ.





