Mysore
29
scattered clouds

Social Media

ಶನಿವಾರ, 07 ಡಿಸೆಂಬರ್ 2024
Light
Dark

ಶ್ರೀರಂಗಪಟ್ಟಣದಲ್ಲಿ 23 ಅಡಿ ಎತ್ತರ ಬೆಳೆದು ಅಚ್ಚರಿ ಮೂಡಿಸಿದ ಕಬ್ಬು

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ದಾಸರಗುಪ್ಪೆ ಗ್ರಾಮದ ರೈತ ಶ್ರೀಕಂಠೇಗೌಡ ಎಂಬುವವರ ಜಮೀನಿನಲ್ಲಿ ಕಬ್ಬು 23 ಅಡಿ ಎತ್ತರ ಬೆಳೆದಿದ್ದು, ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ಶ್ರೀಕಂಠೇಗೌಡ ಅವರು ಬೆಳೆದಿರುವ ವಿಸಿಎಫ್‌-0517 ತಳಿಯ ಕಬ್ಬು ಇದಾಗಿದ್ದು, 23 ಅಡಿ ಬೆಳೆದು ನಿಂತಿದೆ. ಒಂದು ಜೊಲ್ಲೆ ಕಬ್ಬಿನಲ್ಲಿ 40 ಗಿಣ್ಣುಗಳು ಬಂದಿದ್ದು, ರೈತರಿಗೆ ಆಶ್ಚರ್ಯವಾಗಿದೆ. ಕಬ್ಬು ಕಡಿಯುವ ಕೃಷಿ ಕಾರ್ಮಿಕರನ್ನು ಸಹ ಇದು ಚಕಿತಗೊಳಿಸಿದೆ.

ಈ ಬಗ್ಗೆ ಖುಷಿ ಹಂಚಿಕೊಂಡಿರುವ ರೈತ ಶ್ರೀಕಂಠೇಗೌಡ ಅವರು, ಸಾವಯವ ಗೊಬ್ಬರಗಳಿಂದಲೇ ಈ ರೀತಿ ಕಬ್ಬು ಬೆಳೆದಿದೆ. ಯಾರೂ ಕೂಡ ಅತಿಯಾದ ರಾಸಾಯನಿಕಗಳನ್ನು ಬಳಸಬೇಡಿ ಎಂದು ಇತರ ರೈತರಿಗೆ ಮನವಿ ಮಾಡಿದ್ದಾರೆ.

ಇನ್ನು ಈ ಬಗ್ಗೆ ಕೃಷಿ ಸಲಹೆಗಾರ ಜಿ.ಪಿ.ಮೂರ್ತಿ ಸಲಹೆ ನೀಡಿದ್ದು, ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಬೆಳೆಗಳ ಬುಡಕ್ಕೆ ಹಾಕುವ ಮತ್ತು ಎಲೆಗಳಿಗೆ ಸಿಂಪಡಿಸುವ ಸಾವಯವ ಗೊಬ್ಬರಗಳು ಕಡಿಮೆ ಬೆಲೆಗೆ ಸಿಗಲಿದ್ದು, ರೈತರು ಅಂತಹ ಗೊಬ್ಬರಗಳನ್ನು ಬಳಸಬೇಕು. ಆಗ ಮಾತ್ರ ಪೌಷ್ಠಿಕಾಂಶ ದೊರಕುವುದಲ್ಲದೇ ಭೂಮಿಯ ಫಲವತ್ತತೆ ಹಾಳಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

 

 

Tags: