Mysore
22
broken clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಂಡ್ಯ| ಆಗಸ್ಟ್‌ 15 ಕ್ಕೆ ಬುದ್ಧ ಪ್ರತಿಮೆ ಅನಾವರಣ

ಮಂಡ್ಯ: ಬುದ್ಧ ಭಾರತ ಫೌಂಡೇಶನ್ ವತಿಯಿಂದ ಆಗಸ್ಟ್ 15ರಂದು ಭಗವಾನ್ ಗೌತಮ ಬುದ್ಧರ ಪ್ರತಿಮೆ ಅನಾವರಣ ಮತ್ತು ಬೃಹತ್ ಬೈಕ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಗಸ್ಟ್ 15ರಂದು ಬೆಳಿಗ್ಗೆ 11:30 ಗಂಟೆಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗೌತಮ ಬುದ್ಧರ ಪ್ರತಿಮೆಯನ್ನು ತೆರೆದ ಬೆಳ್ಳಿರಥದಲ್ಲಿ ಇರಿಸಿ ಬುದ್ಧರಿಗೆ ಪುಷ್ಪಾರ್ಚನೆ ಮಾಡಿ ನಂತರ ಶ್ರೀರಂಗಪಟ್ಟಣ ತಾಲೂಕಿನ ನೇರಲಕೆರೆಗೆ ಬುದ್ದನ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.

ಅಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಗೌತಮ ಬುದ್ಧರ ರಥಕ್ಕೆ ಚಾಲನೆ ನೀಡಲಿದ್ದು ಮಂಡ್ಯದ ಶಾಸಕ ರವಿಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ .ಜೊತೆಗೆ ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಮನೋರಕಿತ ಬಂತೇಜಿ, ಜಿಲ್ಲಾಧಿಕಾರಿ ಡಾಕ್ಟರ್ ಕುಮಾರ, ಪ್ರೊಫೆಸರ್ ಮಹೇಶ್ ಚಂದ್ರಗುರು,ಪ್ರೊಫೆಸರ್ ಕೆಎಸ್ ಭಗವಾನ್, ನಿವೃತ್ತ ಪೊಲೀಸ್ ಅಧಿಕಾರಿ ಡಾಕ್ಟರ್ ಸುಭಾಷ್ ಭರಣಿ, ಜ್ಞಾನ ಪ್ರಕಾಶ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ವಿಶ್ವಜ್ಞಾನಿ ಡಾ. ಬಿ ಆರ್ ಅಂಬೇಡ್ಕರ್ ಅವರು 2500 ವರ್ಷಗಳ ಹಿಂದೆ ಇತಿಹಾಸದಲ್ಲಿ ಮರೆತು ಹೋಗಿದ್ದ ಈ ನೆಲದ ಸಾಕ್ಷಿ ಪ್ರಜ್ಞೆ ಮತ್ತು ವೈಜ್ಞಾನಿಕ ಚಿಂತಕ ಭಗವಾನ್ ಗೌತಮ ಬುದ್ಧ ಅವರನ್ನು ಪರಿಚಯಿಸಿದ್ದಾರೆ.  ಅಕ್ಟೋಬರ್ 14 ,1956 ರಂದು ಇತಿಹಾಸ ಪ್ರಸಿದ್ಧ ಮಹರಾಷ್ಟ್ರದ ನಾಗಪುರ ದೀಕ್ಷ ಭೂಮಿಯಲ್ಲಿ ತಮ್ಮ 10 ಲಕ್ಷ ಅನುಯಾಯಿಗಳೊಂದಿಗೆ ಅಂಬೇಡ್ಕರ್ ಅವರು ಬೌದ್ಧ ಧಮ್ಮ ದೀಕ್ಷೆ ಪಡೆದುಕೊಂಡಿದ್ದು ಇದು ನವ ಬೌದ್ಧರು ಹುಟ್ಟಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬುದ್ಧ ಭಾರತ ಫೌಂಡೇಶನ್ ಅಧ್ಯಕ್ಷ ಜೆ ರಾಮಯ್ಯ, ಅಂಬೇಡ್ಕರ್ ವಾರಿಯರ್ ಸಂಘಟನೆಯ ಅಧ್ಯಕ್ಷ ಗಂಗರಾಜು, ಥಾಮಸ್ ,ಮೋಹನ್ ಕುಮಾರ್, ಜವರಪ್ಪ, ಲಾರೆನ್ಸ್, ವೇಣುಗೋಪಾಲ್ ಉಪಸ್ಥಿತರಿದ್ದರು.

Tags: