Mysore
21
scattered clouds

Social Media

ಮಂಗಳವಾರ, 27 ಜನವರಿ 2026
Light
Dark

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ

ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ ನಡೆಯುವ‌ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ನಗರದ ಪ್ರಮುಖ ವೃತ್ತಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದ್ದು, ಇಡೀ ನಗರ ಜಗಮಗಿಸುತ್ತಿದೆ.

ಸರ್‌.ಎಂ ವಿಶ್ವೇಶ್ವರಯ್ಯ, ಕರ್ನಾಟಕ;೫೦ ರ ಸಂಭ್ರಮ, ಸಾಹಿತ್ಯ ಸಮ್ಮೇಳನದ ಕೈಪಿಡಿಗಳು ಸೇರಿದಂತೆ ವಿವಿಧ ಆಕೃತಿಗಳು ನಗರದ ಪ್ರಮುಖ ವೃತ್ತಗಳಲ್ಲಿ ಕಂಗೊಳಿಸುತ್ತಿವೆ.

ವಿದ್ಯುತ್‌ ದೀಪಾಲಂಕಾರಕ್ಕೆ ಕನ್ನಡದ ಬಾವುಟ ಹೋಲುವಂತೆ ಕೆಂಪು ಮತ್ತು ಹಳದಿಯ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ.

ಮಂಡ್ಯವನ್ನು ಸ್ವಾಗತಿಸುತ್ತಿರುವ ಕಮಾನುಗಳು ವಿದ್ಯುತ್‌ ದೀಪದಿಂದ ತಮ್ಮ ಅಂದ ಹೆಚ್ಚಿಸಿಕೊಂಡಿವೆ. ನಗರದ ರಸ್ತೆಯ ಎರಡು ಬದಿಯಲ್ಲಿ ದೀಪಾಲಂಕಾರ ಕಂಗೊಳಿಸುತ್ತಿದ್ದು, ಜಿಲ್ಲೆಯ ಜನರು,  ಜಿಲ್ಲೆಗೆ ಆಗಮಿಸಿರುವ ಸಾಹಿತ್ಯಾಸಕ್ತರು ದೀಪಾಲಂಕಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

Tags:
error: Content is protected !!