ಮದ್ದೂರು: ಗಾಂಜಾ ಮಾರಾಟ ಮಾಡಲು ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಯುವಕನನ್ನು ಅಬಕಾರಿ ಪೊಲೀಸರು ತಾಲೂಕಿನ ಹೊಸಗಾವಿಯಲ್ಲಿ ಬಂದಿಸಿದ್ದಾರೆ.
ಗ್ರಾಮದ ಮಹದೇಶ್ವರ ದೇವಸ್ಥಾನದ ಬಳಿ ಎ.ಸಿ. ಭರತ್ ಎಂಬ ಯುವಕನನ್ನು ಬಂದಿಸಿದ್ದು, ಈತನಿಂದ 310 ಗ್ರಾಂ ಒಣ ಗಾಂಜಾ ಸೊಪ್ಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ರಮವಾಗಿ ಗಾಂಜಾ ಸೊಪ್ಪು ಸಂಗ್ರಹಿಸಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿರುವ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಮೈಸೂರು ವಿಭಾಗದ ಜಂಟಿ ಆಯುಕ್ತ, ಉಪ ಆಯುಕ್ತರು ಹಾಗೂ ಮಂಡ್ಯ ವಿಭಾಗದ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಅಬಕಾರಿ ಪೊಲೀಸರು ಹೊಸಗಾವಿ ಗ್ರಾಮದ ದೇವಾಲಯದ ಬಳಿ ಅಕ್ರಮ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಭರತ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನ ಎನ್ ಡಿ ಪಿ ಎಸ್ ಕಾಯ್ದೆ ನಿಯಮಾನುಸಾರ ಬಂಧಿಸಿದ್ದು. ಅಬಕಾರಿ ನಿರೀಕ್ಷಕ ಪ್ರೇಮ್ ಸಾಗರ್ ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಕಾರ್ಯಚರಣೆಯಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳಾದ ಮುತ್ತುರಾಜು ನವೀನ್ ಕುಮಾರ್ ಚಂದ್ರಶೇಖರ್ ವಾಹನ ಚಾಲಕ ಸತೀಶ್ ಭಾಗಿಯಾಗಿದ್ದರು.