ಮಂಡ್ಯ : ಮದ್ದೂರು ಕಲುಷಿತ ಆಹಾರ ಸೇವನೆಯಿಂದ 11 ಕುರಿ ದಾರುಣ ಸಾವಾಗಿರುವ ಘಟನೆ ತಾಲೂಕಿನ ಕುಂದನಕುಪ್ಪೆ ಗ್ರಾಮದಲ್ಲಿ ಜರುಗಿದೆ.
ತಾಲೂಕಿನ ಕುಂದನಕುಪ್ಪೆ ಗ್ರಾಮದ ರೈತ ಲೇಟ್ ಲಿಂಗಯ್ಯನ ಮಗ ಎಲ್ ಮಹೇಶ್ ಅವರು ಸುಮಾರು 40ಕ್ಕೂ ಹೆಚ್ಚು ಕುರಿಗಳನ್ನು ಗ್ರಾಮದ ವರವಲಯದಲ್ಲಿ ಮೇವು ತಿನ್ನಿಸಲು ಕರೆದುಕೊಂಡು ಹೋಗಿದ್ದು ಸಂಜೆ ಹಿಂತುರುಗಿ ಬಂದಾಗ ಮನೆಯ ಬಳಿ ಕುರಿಗಳು ಒದ್ದಾಡಲು ಪ್ರಾರಂಭಿಸಿತು.
ತಕ್ಷಣ ಎಲ್ ಮಹೇಶ್ ಅವರು ಪಶು ವೈದ್ಯಾಧಿಕಾರಿ ಡಾಕ್ಟರ್ ಜ್ಯೋತಿ ಅವರಿಗೆ ದೂರವಾಣಿ ಮೂಲಕ ಕುರಿಗಳ ಸ್ಥಿತಿಗಳ ಬಗ್ಗೆ ವಿವರಿಸಿದಾಗ ತಂಡ ಸ್ಥಳಕ್ಕೆ ಆಗಮಿಸಿ ಸಕಾಲದಲ್ಲಿ ಚಿಕಿತ್ಸೆ ನೀಡಿದ ಹಿನ್ನೆಲೆಯಲ್ಲಿ ಹಲವು ಕುರಿ ಚೇತರಿಸಿಕೊಂಡು 11 ಕುರಿಗಳು ಸಾವನ್ನಪ್ಪಿದೆ.
ರೈತ ಮಹೇಶ್ ಅವರಿಗೆ ಸುಮಾರು 2 ಲಕ್ಷದಷ್ಟು ನಷ್ಟವಾಗಿದ್ದು ಸಂಬಂಧ ಪಟ್ಟ ಅಧಿಕಾರಿಗಳು ನೆರವಿಗೆ ಧಾವಿಸಬೇಕು ಹಾಗೂ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಪರಿಹಾರ ಕೊಡಬೇಕೆಂದು ಗ್ರಾಮದ ಕುಮಾರ್ ವರು ಆಗ್ರಹಿಸಿದ್ದಾರೆ.
ವೈದ್ಯರು ಯಾವುದು ಕಲುಷಿತ ಆಹಾರ ಸೇವನೆಯಿಂದ ಅವುಗಳ ಸಂಭವಿಸಿದ್ದು, ಮುಂದೆ ತುಂಬಾ ಜಾಗೃತರಾಗಿ ರೈತರು ತಮ್ಮ ಭೂ ಜಮೀನುಗಳಲ್ಲಿ ವರವಲಯದಲ್ಲಿ ಮೇವು ಮೇಯಿಸುವಾಗ ಜೋಪಾನವಾಗಿ ನೋಡಿಕೊಳ್ಳಬೇಕು ಎಂದಿದ್ದಾರೆ.