Mysore
26
scattered clouds

Social Media

ಬುಧವಾರ, 27 ಮೇ 2026
Light
Dark

ಮದ್ದೂರು: ಕಾರು-ಗೂಡ್ಸ್‌ ಆಟೋ ಡಿಕ್ಕಿ: 28 ಮಂದಿಗೆ ಗಾಯ

ಮದ್ದೂರು: ತಾಲೂಕಿನ ಮಣಿಗೆರೆ ಬಳಿ ಕಾರು ಹಾಗೂ ಗೊಡ್ಸ್‌ ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ 28 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಗಾಯಳುಗಳನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮದ್ದೂರು ಕ್ಷೇತ್ರದ ಶಾಸಕ ಉದಯ್‌ ಸೇರಿದಂತೆ ಜಿಲ್ಲಾಧಿಕಾರಿ ಡಾ.ಕುಮಾರ್‌, ಎಸ್‌ಪಿ ಮಲ್ಲಿಕಾರ್ಜುನ್‌ ಬಾಲದಂಡಿ ಆಸ್ಪತ್ರೆಗೆ ತೆರಳಿ ಗಾಯಳುಗಳ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ಅಪಘಾತದಲ್ಲಿ ಎಲ್ಲರಿಗೂ ಗಾಯವಾಗಿದೆ. ಯಾವುದೇ ಪ್ರಣಾಪಾಯವಾಗಿಲ್ಲ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರಿಗೂ ಚಿಕಿತ್ಸೆಯ ವೆಚ್ಚ ಭರಿಸಲಾಗುತ್ತದೆ. ಗೂಡ್ಸ್‌ ಗಾಡಿಯಲ್ಲಿ ಹೆಚ್ಚು ಜನರಿದ್ದ ಕಾರಣ ಗಾಯಗಳು ಆಗಿವೆ. ಗೂಡ್ಸ್‌ಗಳಲ್ಲಿ ಜನರನ್ನು ಸಾಗಿಸುವುದು ತಪ್ಪು. ಇದರ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ಉದಯ್‌ ಹೇಳಿದರು.

Tags:
error: Content is protected !!