ಮಂಡ್ಯ: ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವ ಸಂದೇಶ ಸಾರುವ ಹೀಲಿಯಂ ಬಲೂನ್ ಅನಾವರಣಗೊಳಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಇದೇ ರೀತಿಯ ಬಲೂಲ್‌ಗಳನ್ನು ಜಿಲ್ಲಾಧಿಕಾರಿ ಕಛೇರಿ, ಮಂಡ್ಯ ಬಸ್ ನಿಲ್ದಾಣ ಹಾಗೂ ಮದ್ದೂರು ತಾಲ್ಲೂಕು ಕಚೇರಿಯಲ್ಲಿ ಅನಾವರಣಗೊಳಿಸಲಾಗಿದೆ.
ಏ.26 ರಂದು ತಪ್ಪದೇ ಮತದಾನ ಮಾಡಿ, ಸಮರ್ಥ ನಾಯಕರನ್ನು ಆರಿಸೋಣ, ನಮ್ಮ ಮತ ನಮ್ಮ ಹಕ್ಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.