Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಾಹಿತ್ಯ ಸಮ್ಮೇಳನ | ಮನೆಗೊಂದು ಕೋಳಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧ ವಿರೋಧಿಸಿ ಸಮ್ಮೇಳನಕ್ಕಾಗಮಿಸುವ ಅತಿಥಿಗಳಿಗೆ ಬಾಡೂಟ ಬಡಿಸಲು ಮನೆಗೊಂದು ಕೋಡಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ, ಸಮ್ಮೇಳನದಲ್ಲಿ ಮಾಂಸಪ್ರಿಯರಿಗೆ ಅಡುಗೆ ಮಾಡಿಸುತ್ತೇವೆ ಎಂದು ಸಾಹಿತಿ ರಾಜೇಂದ್ರ ಪ್ರಸಾದ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಬಾಡೂಟ, ಬಾಡೂಟದ ಬಳಗವನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಯತ್ನ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರದ ಆಗ್ರಹ ಎಂಬ ತಪ್ಪು ಸಂದೇಶ ರವಾನೆಯಾಗುತ್ತಿದೆ. ಆದರೆ ನಾವು ಮಾಂಸಾಹಾರದ ಪ್ರಾತಿನಿಧ್ಯ ಇರುಬೇಕೆಂಬುದು ಬಳಗದ ಉದ್ದೇಶವಾಗಿದೆ ಎಂದರು.

ಸಮ್ಮೇಳನಕ್ಕೂ ಮೊದಲು ಸಮ್ಮೇಳನದಲ್ಲಿ ತಂಬಾಕು, ಮಧ್ಯಪಾನ ಹಾಗೂ ಮಾಂಸಾಹಾರ ನಿಷೇಧಿಸಲಾಗಿದೆ ಎಂಬ ಹೇಳಿಕೆ ವಿರುದ್ಧ ಇದು ಪ್ರಾರಂಭವಾಗಿದ್ದು, ಮಾಂಸಾಹಾರಕ್ಕೆ ಯಾವುದೇ ರೀತಿಯಲ್ಲಿ ನಿಷೇಧವಿಲ್ಲ. ಆದರೂ ಅದನ್ನು ಕೀಳಾಗಿ, ಅಸ್ಪೃಶ್ಯತೆಯಿಂದ ಕಾಣುತ್ತಿದ್ದು ಅದನ್ನು ಹೋಗಲಾಗಡಿಸುವ ಪ್ರಯತ್ನ ನಮ್ಮದಾಗಿದೆ ಎಂದು ಹೇಳಿದರು.

ಆಹಾರದಲ್ಲಿ ಸಮಾನತೆ ಬರಬೇಕೆಂಬುದು ನಮ್ಮ ಆಶವಾಗಿದ್ದು, ಸಮ್ಮೇಳದ ಸುದ್ದಿ ಪ್ರಕಟವಾಗುವುದೇ ಊಟದ ವಿಷಯವಾಗಿ ಆಗಿದ್ದು, ಸಾಹಿತ್ಯದಿಂದಲ್ಲ ಎಂದ ಅವರು, ಸಾರ್ವಜನಿಕರ ಹಣವನ್ನು ಸಮ್ಮೇಳನದಲ್ಲಿ ಸರ್ಕಾರ ಬಳಸುತ್ತಿದ್ದು, ಸಾರ್ವಜನಿಕರ ಆಯ್ಕೆಗೆ ಹಾಗೂ ಆಹಾರದ ಸಮಾನತೆಗೆ ಅಂಶ ನೀಡುವುದು ಸಮಸ್ಯೆ ಆಗಲಾರದು ಎಂದು ಹೇಳಿದರು.

ಸಮ್ಮೇಳನದಲ್ಲಿ ಒಂದು ಮೊಟ್ಟೆ ಹಾಗೂ ಒಂದು ತುಂಡು ಮಾಸ ನೀಡುವುದರಲ್ಲಿ ಸಮಸ್ಯೆ ಏನಿದೆಯೆಂದು ಕಾಣುತ್ತಿಲ್ಲ, ಬಾಡೂಟಕ್ಕೆ ಅವಕಾಶ ನೀಡದಿದ್ದರೆ ಇಂದಿನಿಂದ ಕೋಳಿ ಮತ್ತು ಮೊಟ್ಟೆ ಸಂಗ್ರಹಿಸಿ ದಾಸ್ತಾನು ಮಾಡಲಾಗುತ್ತಿದೆ ಎಂದರು.

ವಿಚಾರವಾದಿ ಸಂತೋಷ್ ಮಾತನಾಡಿ, ಸಚಿವರು ಸಾಕಾರಾತ್ಮ ಸ್ಪಂದನೆಯ ಭರವಸೆ ನೀಡಿದ್ದು, ಕೊನೆ ದಿನದವರೆಗೂ ಕಾಯುತ್ತೇವೆ. ಆಹಾರ ಸಮಿತಿ ಬಾಡೂಟ ಅನುಷ್ಠಾನಕ್ಕೆ ಮುಂದಾದರೆ ನಾವು ಸಂಗ್ರಹಿಸಿದ ಕುರಿ, ಕೋಣಿ, ಧಾನ್ಯಗಳನ್ನು ಸಮಿತಿಗೆ ಸಲ್ಲಿಸುತ್ತೇವೆ. ಅನುಷ್ಠಾನಗೊಳಿಸದಿದ್ದರೆ ಸಮ್ಮೇಳನ ಸ್ಥಳದ ಆಸುಪಾಸಿನಲ್ಲಿ ಖಂಡನಾ ಸಭೆ ನಡೆಸಿ ಸಾಹಿತ್ಯ ಅತಿಥಿಗಳಿಗೆ ಮೊಟ್ಟೆ, ಮಾಂಸದ ತುಂಡು ನೀಡುತ್ತೇವೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಗೋಷ್ಠಿ ಎಂ.ಬಿ.ನಾಗಣ್ಣಗೌಡ, ಸಮಾನ ಮನಸ್ಕರ ವೇದಿಕೆಯ ಲಕ್ಷ್ಮಣ್ ಚೀರನಹಳ್ಳಿ, ಸಿಐಟಿಯುನ ಸಿ.ಕುಮಾರಿ, ಮನ್ನೂರ್, ವಕೀಲ ಶಿವಶಂಕರ್, ಧನುಷ್ ಇದ್ದರು.

Tags:
error: Content is protected !!