ಮಂಡ್ಯ : ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಮುತ್ತತ್ತಿ ಅರಣ್ಯ ಪ್ರದೇಶದ ಕಾವೇರಿ ವನ್ಯಜೀವಿ ಪ್ರದೇಶದಲ್ಲಿ ಚಿರತೆ ಕಳೇಬರವೊಂದು ಪತ್ತೆಯಾಗಿದೆ.
ಮುತ್ತತ್ತಿ ಅರಣ್ಯ ಪ್ರದೇಶದ ಹುಣಸೆ ಮರದ ಹಳ್ಳದ ಬಳಿ ಸುಮಾರು ಒಂದುವರೆ ವರ್ಷದ ಹೆಣ್ಣು ಚಿರತೆ ಮೃತ ಪಟ್ಟಿರುವುದು ಗಸ್ತಿನಲ್ಲಿದ್ದ ಸಿಬ್ಬಂದಿಗೆ ಕಂಡು ಬಂದಿದೆ. ಕೂಡಲೆ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ, ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲಿಸಿದಾಗ ಇದು ಚಿರತೆಗಳ ಕಾದಾಟದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.





