Mysore
29
clear sky

Social Media

ಗುರುವಾರ, 29 ಜನವರಿ 2026
Light
Dark

ಮೇ.23 ರಂದು ಕುಲದಲ್ಲಿ ಕೀಳ್ಯಾವುದೋ ಚಿತ್ರ ಬಿಡುಗಡೆ

kuladalli keelyavudo

ಮಂಡ್ಯ: ಯೋಗರಾಜ್ ಸಿನಿಮಾಸ್ ಅರ್ಪಿಸುವ ಪರ್ಲ್ ಸಿನಿಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡ ನಗುವಿನೊಂದಿಗೆ ಮಾಸ್ ಅಂಶಗಳಿರುವ ಒಂದು ಉತ್ತಮ ಸಂದೇಶ ನೀಡುವ ಕುಲದಲ್ಲಿ ಕೀಳ್ಯಾವುದೋ ಚಲನಚಿತ್ರವು ಮೇ.೨೩ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಲನಚಿತ್ರದ ನಾಯಕನಟ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೇನೂರು ಮನು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೨.೭೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಚಲನಚಿತ್ರಕ್ಕೆ ಯೋಗರಾಜ್‌ಭಟ್ ಅವರ ಕಥೆ, ಸಾಹಿತ್ಯವಿದ್ದು, ಕೆ.ರಾಮ್‌ನಾರಾಯಣ್ ನಿರ್ದೇಶಿಸಿದ್ದಾರೆ ಎಂದರು.

ಬಹುತಾರಾಗಣ ಹೊಂದಿರುವ ಚಲನಚಿತ್ರದಲ್ಲಿ ಯೋಗರಾಜ್ ಭಟ್, ಸೋನಾಲ್ ಮೊಂತೆರೂ, ತಬಲನಾಣಿ, ಶರತ್‌ಲೋಹಿತಾಶ್ವ, ಡ್ರಾಗನ್ ಮಂಜು, ಜೇಡರಹಳ್ಳಿ ಕೃಷ್ಣಪ್ಪ, ಕರಿಸುಬ್ಬು, ಹರಿಶ್‌ರಾಜು, ಸೀನ, ನಾಗೇಂದ್ರ ಅರಸ್ ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ೫ ಹಾಡುಗಳಿರುವ ಚಲನಚಿತ್ರವು ರಾಮನಗರ, ಚನ್ನಪಟ್ಟಣ, ಸಕಲೇಶಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಶಿವಮೂರ್ತಿ, ಮಂಡ್ಯ ಮಂಜು, ಹೇಮಂತ್ ಇದ್ದರು.

Tags:
error: Content is protected !!