Mysore
26
few clouds

Social Media

ಭಾನುವಾರ, 29 ಡಿಸೆಂಬರ್ 2024
Light
Dark

ಜನವರಿ.1ರವರೆಗೂ ಕೆಆರ್‌ಎಸ್‌ ಸಂಗೀತ ಕಾರಂಜಿ ಪ್ರದರ್ಶನ ಬಂದ್‌

ಮಂಡ್ಯ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯದಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಮಾಡಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಉತ್ತರ ಬೃಂದಾವನದಲ್ಲಿರುವ ಸಂಗೀತ-ನೃತ್ಯ ಕಾರಂಜಿಯ ಪ್ರದರ್ಶನವನ್ನು ಸಹ ಬಂದ್‌ ಮಾಡಲಾಗಿದೆ.

ಜನವರಿ.1ರವರೆಗೂ ಕಾರಂಜಿ ಕಾರ್ಯಕ್ರಮ ಬಂದ್‌ ಆಗಲಿದ್ದು, ಅಲ್ಲಿಗೆ ತೆರಳುವ ಪ್ರವಾಸಿಗರು ಮಾಹಿತಿ ತಿಳಿದುಕೊಂಡು ಹೋಗುವಂತೆ ಸೂಚನೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಕೆಆರ್‌ಎಸ್‌ಗೆ ಹೋಗುವ ಪ್ರವಾಸಿಗರು ವಿಷಯ ತಿಳಿದು ಬೇರೆ ಸ್ಥಳಗಳಿಗೆ ಹೋಗಲು ಪ್ಲಾನ್‌ ಮಾಡಿದ್ದಾರೆ.

ಇನ್ನು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ನಿಧನದ ಹಿನ್ನೆಲೆಯಲ್ಲಿ ಏಳು ದಿನಳ ಕಾಲ ಶೋಕಾಚರಣೆ ಆಚರಿಸಲು ಸರ್ಕಾರ ನಿರ್ಧಾರ ಮಾಡಿದ್ದರೂ ಕೆಆರ್‌ಎಸ್‌ನಲ್ಲಿ ಮಾತ್ರ ಅಧಿಕಾರಿಗಳು ಸಂಗೀತ ಕಚೇರಿ ನಡೆಸುವ ಮೂಲಕ ಮನಮೋಹನ್‌ ಸಿಂಗ್‌ ಅವರಿಗೆ ಅಗೌರವ ತೋರಿದ್ದರು.

ಈ ಸುದ್ದಿ ಎಲ್ಲಾ ಕಡೆ ಬಿತ್ತರವಾಗುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

Tags: