ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದ ಪರಿಣಾಮವಾಗಿ ಕೆ.ಆರ್ ಎಸ್ ಜಲಾಶಯದ ಒಳಹರಿವು ಪ್ರಮಾಣ ಇಳಿಕೆಯಾಗಿದೆ.
ನಿನ್ನೆ ಜಲಾಶಯದಲ್ಲಿ ೪೬೭೩ ಕ್ಯೂಸೆಕ್ ಇದ್ದ ಒಳಹರಿವು ಈಗ ೩೪೦೬ ಕ್ಯೂಸೆಕ್ ಗೆ ಇಳಿಕೆಯಾಗಿದೆ. ೧೨೪.೮೦ ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ ೧೦೪.೬೦ ಅಡಿ ನೀರು ಸಂಗ್ರಹವಾಗಿದೆ. ಇನ್ನು ೪೯.೪೫೨ ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ೨೬೬೩೫ ಟಿಎಂಸಿ ನೀರು ಶೇಖರಣೆಯಾಗಿದೆ. ಡ್ಯಾಂನಿಂದ ನಾಲೆ ಹಾಗೂ ಕುಡಿಯುವ ನೀರಿಗಾಗಿ ೨೨೫೭ ಕ್ಯೂಸೆಕ್ ನೀರು ಹೊರಹರಿವು ಇದೆ