ಮಂಡ್ಯ: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಲಾರಿಗಳ ಮಧ್ಯೆ ಅಪಘಾತ ಸಂಭಾವಿಸಿದ್ದು, ಸ್ಥಳದಲ್ಲೇ ಇಬ್ಬರ ದುರ್ಮರಣವಾಗಿದೆ.
ಈ ಘಟನೆ ಮಂಡ್ಯ ಹೊರವಲಯದ ಎಕ್ಸ್‌ಪ್ರೆಸ್ ಹೈವೈನಲ್ಲಿ ಶನಿವಾರ ನಡೆದಿದ್ದು, ಎರಡು ಲಾರಿಗಳ ನಡುವಿನ ರಭಸಕ್ಕೆ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಲಾರಿ ಮುಂಭಾಗ ನುಜ್ಜುಗುಜ್ಜಾಗಿದೆ. ಅಲ್ಲದೇ ಲಾರಿ ಚಾಲಕ ಸೈಯದ್ ಮಂಡಲ್ ಹಾಗೂ ಕ್ಲೀನರ್ ಸಿರಾಜುದ್ದೀನ್ ಮೃತಪಟ್ಟಿದ್ದಾರೆ.
ಅಪಘಾತದ ಲಾರಿಗಳು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.